ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹೂಮ್ಯಾನಿಟೀಸ್‌ನ ಮೀಡಿಯಾ ಸ್ಟಡೀಸ್ ವಿಭಾಗ ಮತ್ತು ಸಾಲ್ಟ್ ಸ್ನಾಪ್ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ಉದ್ಯಮಶೀಲ ಅಭಿವೃದ್ಧಿ ವಿಚಾರ ಸಂಕಿರಣ– “ಲೈಟ್ಸ್, ಕ್ಯಾಮೆರಾ ಮತ್ತು ಎಂಟ್ರಪ್ರೊನೋರ್ಶಿಪ್” ಅನ್ನು ವಿವಿಯ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಸೋಮವಾರ ಆಗಸ್ಟ್ 18ರಂದು ಆಯೋಜಿಸಲಾಯಿತು.
ಸಂಕಿರಣದ ಮುಖ್ಯ ಭಾಷಣಗಾರರಾಗಿ ಬಾಲಿವುಡ್ ಖ್ಯಾತ ಸಿನೆಮಾ ಮತ್ತು ಸಂಗೀತ ವಿಡಿಯೋ ನಿರ್ದೇಶಕಿ ಸ್ನೇಹ ಶೆಟ್ಟಿ ಕೊಹ್ಲಿ ಮಾತನಾಡಿ, ನಿಮ್ಮ ಕನಸು ನನಸು ಮಾಡಲು ಪ್ರತಿಯೊಂದು ಪ್ರಯತ್ನ, ಶ್ರಮ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಕನಸಿನ ಕಡೆಗಡೆಗೆ ಗಮನವಿಟ್ಟು ನಿಮ್ಮ ಪ್ರಯತ್ನ ಮುಂದುವರಿಸಿದಾಗ ಸುಲಭವಾಗಿ ನಿಮ್ಮ ಗೆಲುವಿನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಕೆಲವೊಂದು ಬಾರಿ 12 ರಿಂದ 24 ಗಂಟೆಗಳ ಸತತ ಪರಿಶ್ರಮದ ಕೆಲಸ ಉತ್ತಮ ಫಲಿತಾಂಶವನ್ನು ಒದಗಿಸಿಕೊಡುತ್ತದೆ. ನಂಬಿಕೆ ಮತ್ತು ಆತ್ಮಸ್ಥೈರ್ಯ ನಿಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು.
ಆಡ್ಮಿನ್ ಬ್ಲಾಕ್ ನಿರ್ದೇಶಕ ಚಾರ್ಲ್ಸ್ ಫುರ್ಟಾಡೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಏನಾದರೂ ಹೊಸತನವನ್ನು ಹುಡುಕಲು ಮುಂದಾಗಬೇಕು. ಕಲಿಯುವ ಹಂತದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಬೆಳೆಯುತ್ತಾರೆ. ನಮ್ಮ ಜೀವನದಲ್ಲಿ ನಮ್ಮದೇ ಸ್ವತಃ ಪರಿಕಲ್ಪನೆಯ ಬರಹಗಳು ನಮ್ಮನ್ನು ಸಮಾಜಕದಲ್ಲಿ ಉನ್ನತ ವ್ಯಕ್ತಿಯನ್ನಾಗಿಸಲು ಸಹಕರಿಸುತ್ತದೆ. ಈ ಸಮಾಜದಲ್ಲಿ ಉದ್ಯೋಗ ಒದಗಿಸುವರ ಅಗತ್ಯ ಹೆಚ್ಚಿದೆ ಎಂದರು.
ಸಾಲ್ಟ್ ಸ್ನಾಪ್ ಮೀಡಿಯಾದ ಸಾರ್ವಜನಿಕ ಸಂಪರ್ಕ ಸಹಾಯಕಿ ಲೆಟಿಶಿಯಾ ಡಿಕೋಸ್ಟಾ ಸಂಕಿರಣದ ಸಮಾಲೋಚಕರಾಗಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಮಫೈ ಬ್ಲಾಕಿನ ನಿರ್ದೇಶಕಿ ಡಾ. ಲವೀನ ಲೋಬೋ, ಡೀನ್ ಡಾ. ರೋಸ್ ವೀರ ಡಿಸೋಜ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥೆ, ಭವ್ಯಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ವೆನ್ಸಿಟಾ ಡಯಾಸ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ