ಮಂಗಳೂರು: ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಸ್ವದೇಶಿ ಪಾವತಿ ಆ್ಯಪ್ 'ಭೀಮ್' ವತಿಯಿಂದ ಸೋನಿ ಎಂಟರ್‍ಟೈನ್‍ಮೆಂಟ್ ಸಹಯೋಗದಲ್ಲಿ ಒಂದು ವಾರದ ವಿಶೇಷ ಗೇಮ್ ಶೋ 'ಕೌನ್ ಬನೇಗಾ ಕರೋಡ್‍ಪತಿ' (ಕೆಬಿಸಿ) ಹಮ್ಮಿಕೊಂಡಿದೆ.
ದೇಶಾದ್ಯಂತ ಸುರಕ್ಷಿತ ಮತ್ತು ನಂಜಿಕೆಯ ಡಿಜಿಟಲ್ ಪಾವತಿಯನ್ನು ವ್ಯಾಪಕವಾಗಿ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಪ್ರಚುರಪಡಿಸಲಾಗುತ್ತಿದೆ. ಇದರಲ್ಲಿ ದೇಶದ ಎಲ್ಲ 'ಭೀಮ್' ಆ್ಯಪ್ ಬಳಕೆದಾರತು ಅಮಿತಾಬ್ ಬಚ್ಚನ್ ಜತೆಗೆ ಗೇಮ್ ಆಡಲು ಅವಕಾಶ ಇರುತ್ತದೆ. ಈ ಗೋಲ್ಡನ್ ವೀಕ್ ನೋಂದಣಿ ಗವಾಕ್ಷಿ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗೆ ತೆರೆದಿರುತ್ತದೆ ಎಂದು ಎನ್‍ಬಿಎಸ್‍ಎಲ್ ಸಿಇಓ ಲಲಿತಾ ನಟರಾಜ್ ಹೇಳಿದ್ದಾರೆ.
'ಭೀಮ್'ನ ಹತ್ತು ಆಯ್ಕೆ ಮಾಡಲಾದ ಬಳಕೆದಾರರಿಗೆ ಶೋದಲ್ಲಿ ಭಾಗವಹಿಸಿ ಫಾಸ್ಟೆಸ್ಟ್ ಫಿಂಗರ್ ಮೊದಲ ಸುತ್ತಿನಲ್ಲಿ ಆಡಲು ವಿಶೇಷ ಅವಕಾಶ ನೀಡಲಾಗುತ್ತದೆ. ಈ 10 ಸ್ಪರ್ಧಿಗಳೊಂದಿಗೆ 5 ಕಂತು ಹೊಂದಿರುವ ವಿಶೇಷ ವಾರದ ಗೇಮ್ ಶೋ ಆಯೋಜಿಸಲಾಗಿದ್ದು, ಸೋನಿ ಎಂಟರ್‍ಟೈನ್ಮೆಂಟ್‍ನಲ್ಲಿ ಇದು ಪ್ರಸಾರವಾಗಲಿದೆ ಎಂದು ವಿವರಿಸಿದ್ದಾರೆ.
ದರ್ಶಕರು ಭೀಮ್ ಆ್ಯಪ್ ಡೌನ್‍ಲೋಡ್/ ಅಪ್‍ಡೇಟ್ ಮಾಡಿಕೊಳ್ಳಲು ಮತ್ತು ವಿಶೇಷ ಕೆಬಿಸಿ ಗೋಲ್ಡನ್ ವೀಕ್ ವಿದ್ ಭೀಮ್ ವಿಭಾಗದ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ