ನಾಟ್ಯಾಲಯ- ಕಮಲಾಂಜಲಿ 2025: ಕೀರ್ತಿಶೇಷ ಕಮಲಾ ಭಟ್ ಸಂಸ್ಕರಣೆ

Upayuktha
0


ಮಂಗಳೂರು: ಸಾಹಿತ್ಯದ ಒಳ ಮರ್ಮವನ್ನು ಅರಿತು ಸೃಜನಶೀಲತೆಯಿಂದ ನೃತ್ಯ ಪ್ರದರ್ಶನ ಮಾಡಿದಾಗ ಬ್ರಹ್ಮಾನಂದ ಅನುಭವವನ್ನು ಅನುಭವಿಸಲು ಸಾಧ್ಯ ಇಂದು ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣ ದಾಸ ಅಸ್ರಣ್ಣರವರು ನುಡಿದರು.


ಅವರು ಇತ್ತೀಚೆಗೆ ನಾಟ್ಯಾಲಯ ಉರ್ವ ಇವರು ಪುರಭವನದಲ್ಲಿ ಆಯೋಜಿಸಿದ್ದ ಕೀರ್ತಿಶೇಷ ಗುರು ಶ್ರೀಮತಿ ಕಮಲಾ ಭಟ್ ಸಂಸ್ಮರಣೆ ಕಮಲಾಂಜಲಿ 2025 ಹಾಗೂ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದಿಸಿ ಆಶೀರ್ವಚನ ನೀಡಿದರು.


ಭಾರತೀಯ ಲಲಿತ ಕಲೆಗಳಲ್ಲಿ ಗುರು-ಶಿಷ್ಯ ಪರಂಪರೆಯನ್ನು ಭರತನಾಟ್ಯಕಲಾ ಪ್ರಕಾರದಲ್ಲಿ ಮಾತ್ರ ಕಾಣಲು ಸಾಧ್ಯ. ಇದು ಒಂದು ಒಳ್ಳೆಯ ಸಂಪ್ರದಾಯ. ಕೀರ್ತಿ ಶೇಷ ಕಮಲ ಭಟ್ ಇವರು ಶ್ರದ್ಧೆಯಿಂದ ಗುರುಗಳಾದ ಉಲ್ಲಾಲ ಮೋಹನ್ ಕುಮಾರ್ ರಲ್ಲಿ ಕಲಿತು ಅಷ್ಟೇ ಶ್ರದ್ಧೆಯಿಂದ ನಗರದಲ್ಲಿ ಪಸರಿಸಿ ಕಲೆಯ ಶ್ರೀಮಂತಿಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದವರು. ಇಂದು ಅವರಿಂದ ಕಲಿತ ಹಿರಿಯ ಶಿಷ್ಯ ವಿದುಷಿ ವಿನಯ ಅದನ್ನು ಮುಂದುವರಿಸುತ್ತಾ ಇರೋದು ಅಭಿನಂದನೀಯ ಎಂದು ಕಮಲ ಭಟ್ಟರ ಆಸೆಯಂತೆ ಅವರ ಗುರುಗಳಾದ ಉಳ್ಳಾಲ ಮೋಹನಕುಮಾರ್ ಇವರನ್ನು ಮಂಗಳವಾದ್ಯ ವೇದ ಘೋಷಗಳೊಂದಿಗೆ ಅಭಿನಂದಿಸಿ ಆಶೀರ್ವದಿಸಿದರು.



ಸಂಸ್ಕಾರ ಭಾರತೀಯ ಮಂಗಳೂರು ನಗರದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಇವರು ಗುರುಗಳಾದ ಉಳ್ಳಾಲ ಮೋಹನ ಕುಮಾರ್ ಇವರ ಬಗ್ಗೆ ಅಭಿನಂದನ ಮಾತುಗಳನ್ನಾಡಿದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಇವರು ಶುಭ ಹಾರೈಸಿದರು. ಸಂಘಟಕ ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಸ್ತಾವಿಸಿದರು. ಸನಾತನ ನಾಟ್ಯಾಲಯದ ವಿದುಷಿ ಶ್ರೀಲತಾ ನಾಗರಾಜ್ ನಿರೂಪಿಸಿದರು.


ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ರಾವ್ ವಂದಿಸಿದರು. ವಿದುಷಿ ವಿನಯ ರಾವ್ ನಿರ್ದೇಶನದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು. ಭರತಾಂಜಲಿ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮದ ನಿರೂಪಣೆ ಮಾಡಿದರು. 


ಕೃಷ್ಣ ರಾವ್, ವಿದುಷಿ ವಾಣಿ, ಮಾಧವ ಎಸ್, ಪ್ರಸನ್ನ, ಮಾಧವ ಜೋಗಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top