ಕಾರ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಕಳದ ಬಳಿ ನಕ್ರೆಯಲ್ಲಿರುವ ಖ್ಯಾತ ಸಾಹಿತಿ, ಶಿಕ್ಷಕ ಜೋರ್ಜ್ ಕ್ಯಾಸ್ತೆಲಿನೊರವರ ಮನೆ 'ನಿಸರ್ಗ' ಕಲಾಂಜಲಿ ವೇದಿಕೆಯಲ್ಲಿ ತನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾದ 'ಸಾಹಿತ್ಯ ಸಂಭ್ರಮ- 2 ಮತ್ತು ಕಾವ್ಯಾಂ- ವ್ಹಾಳೊ- 5 ಕಾರ್ಯಕ್ರಮವು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್ ರವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಸಾಹಿತ್ಯದ ಸಂಭ್ರಮವು ನಮ್ಮ ಬದುಕಿನ ಸಂಭ್ರಮವಾಗಬೇಕು. ಎಲ್ಲೆಲ್ಲಿಯೂ ಕೊಂಕಣಿಯ ಸದ್ದು ಸಡಗರ ಕೇಳಬೇಕು ಎಂದು ಕರೆಕೊಟ್ಟರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಂ| ಸ್ವಾಮಿ| ಪ್ರಾನ್ಸಿಸ್ ಲುವಿಸ್ ಡೆಸಾರವರು ಮಾತಾನಾಡಿ, ಕೊಂಕಣಿ ನಮ್ಮ ಜೀವಂತರಗತ ಭಾಗವಾಗಬೇಕು. ಅದು ಬರೇ ಬಳಸುವ ವಸ್ತುವಾಗಬಾರದು. ನಮ್ಮ ಮಾತೃಭಾಷೆಯಲ್ಲಿ ನಾವು ಯೋಚನೆ ಮಾಡುವುದು ಸಾಧ್ಯ. ಆ ಯೋಚನೆಯನ್ನು ಕಾರ್ಯರೂಪಗೊಳಿಸಲು ನಾವೆಲ್ಲರೂ ಪ್ರವೃತ್ತರಾಗಬೇಕೆಂದು ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಛಂದೋಶಾಸ್ತ್ರ ತಜ್ಞರು ರಾಮಾಯಣವನ್ನು ವಿವಿಧ ಭಾಷೆಗಳಲ್ಲಿ ಬರೆದಿರುವ ನಾರಾಯಣ ಎಸ್. ಗವಾಳ್ಕರ್ ರವರನ್ನು ಸನ್ಮಾನಿಸಲಾಯಿತು. ಯುವ ಸಾಹಿತಿ ಹಾಗೂ ಹೆಸರಾಂತ ಕಾರ್ಯಕ್ರಮ ನಿರ್ವಾಹಕರಾದ ಶ ಎಲ್ಸನ್ ಡಿಸೋಜ ಹಿರ್ಗಾನ್ ರವರು ಸಭೆಯಲ್ಲಿ ಹಿರಿಯ ಸಾಹಿತಿ ಹಾಗೂ ಖ್ಯಾತ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕರಾದ ಜೋರ್ಜ್ ಕ್ಯಾಸ್ತೆಲಿನೊ ಅವರೊಂದಿಗೆ ಸಂವಾದ ನಡೆಸಿದರು. ಜೋರ್ಜ್ ಕ್ಯಾಸ್ತೆಲಿನೊರವರು ತಮ್ಮ ಬದುಕಿನ ಆಯಾಮಾಗಳನ್ನು ಆಸಕ್ತಿದಾಯಾಕವಾಗಿ ಸಭೆಯ ಮುಂದಿಟ್ಟರು.
ಕಾವ್ಯಾಂ - ವ್ಹಾಳೊ -5 ಕಾರ್ಯಕ್ರಮದಲ್ಲಿ ಖ್ಯಾತ ಕೊಂಕಣಿ ಕವಿಗಳಿಂದ ಕವಿಗೋಷ್ಟಿ ನಡೆಸಲ್ಪಟ್ಟಿತು. ಕವಿಗೋಷ್ಟಿಯ ನಿರ್ವಹಣೆಯನ್ನು ಲವೀಟಾ ಡಿಸೋಜ, ನಕ್ರೆಯವರು ನಡೆಸಿಕೊಟ್ಟರು. ರಾಮಚಂದ್ರ ಪೈ, ಶ್ರೀಮತಿ ಪ್ರಮೀಳಾ ಫ್ಲಾವಿಯಾ, ಕಾರ್ಕಳ, ರಾಘವೇಂದ್ರ ಪ್ರಭು, ಕರ್ವಾಲು, ಓಜ್ವಾಲ್ಡ್ ಮರಿಯನ್ ಡಿಸೋಜ, ಡಾ| ಸುಮತಿ ಪಿ., ಪ್ರಕಾಶ್ ಮಾರ್ಟಿಸ್, ಕಾಂತಾವರ ಶಿವಾನಂದ ಶೆಣೈ, ರೋಬರ್ಟ್ ಮಿನೇಜಸ್ ಕಣಜಾರ್, ಶ್ರೀಮತಿ ಸೀಮಾ ಕಾಮತ್, ಪ್ರಕಾಶ್ ಡಿಸೋಜ ಅಜೆಕಾರ್ ಇವರು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಜೆರಾಲ್ಡ್ ಪ್ರಕಾಶ್ ಮಾರ್ಟಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯ ಸಂಚಾಲಕ ದಯಾನಂದ್ ಮಡ್ಕೆಕಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ