ಮಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯವರು ಭಾನುವಾರ (ಆ.3)ದಂದು ಬೆಂಗಳೂರಿನ ಕನ್ನಡ ಭವನದ ನಯನಾ ಸಭಾಂಗಣದಲ್ಲಿ ಮಹಿಳಾ ಉತ್ಸವ- 2025 ಕಾರ್ಯಕ್ರಮ ಆಯೋಜಿಸಿದ್ದರು.
ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಆರು ತಿಂಗಳ ಕಾಲ ಸಂಸ್ಥೆಯಿಂದ ವಿದ್ಯಾರ್ಥಿವೇತನ ಪಡೆದ ಮಹಿಳಾ ಕಲಾವಿದರಿಂದಲೇ ಶಶಿಪ್ರಭಾ ಪರಿಣಯ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು. ತಂಡದ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗವನ್ನೂ ಪ್ರದರ್ಶಿಸಲಾಯಿತು. ಈ ಎರಡೂ ಪ್ರಸಂಗಗಳನ್ನು ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ಸಂಯೋಜಿಸಿದ್ದು, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ. ನಿರ್ದೇಶಿಸಿದ್ದರು.
ಮುಮ್ಮೇಳದಲ್ಲಿ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ., ಆಶಾ ಆರ್. ಅನ್ನಪೂರ್ಣೇಶ್ವರಿ, ಸುಮಾ ಅನಿಲ್ ಕುಮಾರ್, ಶಶಿಕಲಾ, ಲಕ್ಷ್ಮೀರಾವ್, ಶ್ವೇತಾ, ಅಮಿತ, ಅಂಬಿಕಾ, ಚೈತ್ರಾ ಆರ್. ಆಚಾರ್, ಚೈತ್ರಾ ಭಟ್, ದೀಕ್ಷಾ ಭಟ್, ಸಹನಾ ಜಿ, ಧೃತಿ ಅಮ್ಮೆಂಬಳ, ಅಭಿಶ್ರೀ ಶ್ರೀಹರ್ಷ, ರಕ್ಷಾ ವಿ, ಮಾನ್ಯ, ಯಾದ್ವಿ, ಸಹನಾ ಅನಿಲ್ ಕುಮಾರ್, ಗಗನ ಅನಿಲ್ ಕುಮಾರ್, ಕೃತಿ ಅಮ್ಮೆಂಬಳ ಭಾಗವಹಿಸಿದ್ದರು.
ಸಂಸ್ಥೆಯ ಪುಟಾಣಿ ಕಲಾವಿದರಿಂದ ಧೀರವೈಯ್ಯಾರ ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರಯೋಗವೂ ನಡೆಯಿತು.
ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ ಭಾಗವತರಾಗಿ, ಗೌತಮ ಸಾಸ್ತಾನ ಮೃದಂಗದಲ್ಲಿ, ಸುಬ್ರಹ್ಮಣ್ಯ ಎಂ ಅವರು ಚೆಂಡೆ ವಾದಕರಾಗಿದ್ದರು.
ಬಳಿಕ 'ಕೃಷ್ಣ ಕೃಷ್ಣ ಕೃಷ್ಣʼ- ಶ್ರೀಕೃಷ್ಣ ರಸಾಮೃತ ಎಂಬ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ ಇತಿಹಾಸ ತಜ್ಞೆ ಡಾ. ಕರುಣಾ ವಿಜಯೇಂದ್ರ ಭಾಗವಹಿಸಿ ಮಾತನಾಡಿ ಯಕ್ಷಗಾನ ಕಲೆಯನ್ನು ಜಾನಪದ ಕಲೆ ಎಂದು ಹೇಳುತ್ತಿದ್ದೇವೆ. ಆದರೆ, ಅದು ಜನರಿಂದ ಹರಡಿ ಹೆಮ್ಮರವಾದ ಒಂದು ಕಲಾ ಪ್ರಕಾರ ಎಂದು ವ್ಯಾಖ್ಯಾನಿಸಿದರು.
ಕಾರ್ಯಕ್ರಮವನ್ನು ಚೈತ್ರಾ ರಾಜೇಶ್ ಆಚಾರ್ ಮತ್ತು ಡಾ. ಸುಪ್ರೀತಾ ಗೌತಮ್ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ