ಸೆ.14 ರಂದು ದಾವಣಗೆರೆಯ ಶ್ರೀ ವಿರಕ್ತಮಠದಿಂದ ರಾಜ್ಯಮಟ್ಟದ ಉಚಿತ ಕವಿಗೋಷ್ಠಿಗೆ ಆಹ್ವಾನ

Chandrashekhara Kulamarva
0



ದಾವಣಗೆರೆ: ದಾವಣಗೆರೆಯ ಶ್ರೀ ವಿರಕ್ತಮಠ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ದಾವಣಗೆರೆ ಜಾಗತಿಕ ಲಿಂಗಯತ ಮಹಾಸಭಾ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 14ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಚೌಕಿಪೇಟೆಯಲ್ಲಿರುವ ಶ್ರೀ ವಿರಕ್ತ ಮಠ ಸಭಾಂಗಣದಲ್ಲಿ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಿರಕ್ತಮಠದ ಗುರುಗಳಾದ ಡಾ. ಶ್ರೀ ಬಸವಪ್ರಭು ಸ್ವಾಮೀಜಿಯವರು ತಿಳಿಸಿದ್ದಾರೆ.

ಅಂದು ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಕುರಿತಂತೆ 15 ರಿಂದ 20 ಸಾಲಿನಲ್ಲಿ ಕವನ ವಾಚನ ಮಾಡಬಹುದು. ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಕನ್ನಡ ತಾಯಿ ಭುನವೇಶ್ವರಿಯ ಸ್ಮರಣಿಕೆ, ಅಭಿನಂದನಾ ಪತ್ರ, ಕಾವ್ಯಕುಂಚ ಭಾಗ-5ನೇ ಕವನ ಸಂಕಲನ ವಿತರಿಸಲಾಗುತ್ತದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ. ಸೆಪ್ಟೆಂಬರ್ 10 ರೊಳಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ತಮ್ಮ ತಮ್ಮ ಹೆಸರು, ಊರು, ಜಿಲ್ಲೆ, ವ್ಯಾಟ್ಸಪ್ ಸಂಖ್ಯೆಯನ್ನು ನೊಂದಾಯಿಸಬೇಕಾಗಿ ದಾವಣಗೆರೆ ಜಾಗತಿಕ ಲಿಂಗಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಲೋಕೇಶ್ ವಿನಂತಿಸಿದ್ದಾರೆ. 7022002518, 9844691391


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top