ಆ.30: ಜಗದ್ಗುರು ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ

Chandrashekhara Kulamarva
0



ಉಡುಪಿ: ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅಂಚೆ ಚೀಟಿಗಳು ನಮ್ಮ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪರಿಚಯಿಸುವುದರೊಂದಿಗೆ ನಮ್ಮ ನಾಡಿನ ವಿಶೇಷತೆಗಳನ್ನು, ವಿಶಿಷ್ಟ ವ್ಯಕ್ತಿ ಗಳನ್ನು, ವಿಶಿಷ್ಟ ಸಂಧರ್ಭಗಳನ್ನು ಸ್ಮರಣೀಯಗೊಳಿಸುತ್ತವೆ. 


ಜಗದೊಡೆಯ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಅಷ್ಟ ಮಠಗಳಿಗೆ ಪೂಜಾ ಕೈಂಕರ್ಯ ಒಪ್ಪಿಸಿದ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ದ್ವೆತ ಮತ ಪ್ರತಿಪಾದಕ ಪೂಜನೀಯ ಆಚಾರ್ಯ ಮಧ್ವರ ಸಂಸ್ಮರಣೆಯಲ್ಲಿ ಅವರ ಅಂಚೆ ಚೀಟಿ ಬಿಡುಗಡೆಗೊಳ್ಳಲಿದೆ.


ಸಂವಹನ ಮತ್ತು ಭಾರತೀಯ ಅಂಚೆ ಇಲಾಖೆಯ ಈ ಸಮಾರಂಭದಲ್ಲಿ ಅದಮಾರು ಶ್ರೀ ಶ್ರೀ ವಿಶ್ವಪ್ರಿಯ ತೀರ್ಥರು ಹಾಗೂ  ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಆಶೀರ್ವಾದ ದೊಂದಿಗೆ ಮಾನ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಘನ ಉಪಸ್ಥಿತಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಪ್ರಾಯೋಜಕತ್ವದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕೆ ಪ್ರಕಾಶ್ ರವರು ಆಗಸ್ಟ್ 30 ರ ಸಂಜೆ ನಾಲ್ಕು ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ.


ಪರ್ಯಾಯ ಪುತ್ತಿಗೆ ಶ್ರೀಗಳ ಜನ್ಮ ನಕ್ಷತ್ರದ ಈ ಶುಭ ಸಂದರ್ಭದಲ್ಲಿ ಶ್ರೀ ಮಧ್ವಚಾರ್ಯರ ಅಂಚೆ ಚೀಟಿಯ ಬಿಡುಗಡೆ ಸಂತಸ ಹೆಚ್ಚಿಸಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಅಂಚೆ ಚೀಟಿ ಬಿಡುಗಡೆ ಸಭಾ ಕಾರ್ಯಕ್ರಮದ ಅಧ್ಯಕ್ಷರೂ ಆಗಿರುವ ಡಾ ಹೆಚ್ ಎಸ್ ಬಲ್ಲಾಳ್ ಹಾಗೂ ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾಗಿರುವ ರಮೇಶ್ ಪ್ರಭು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top