ಪ್ರಕೃತಿ ಸ್ವರೂಪ ಗಣೇಶ

Upayuktha
0



ಣೇಶ ಚತುರ್ಥಿಯು ಹಿಂದೂ ಧರ್ಮದ  ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬದ ಆಚರಣೆಯು ಹೊಸ ಆರಂಭ, ಸಮೃದ್ಧಿ ಮತ್ತು ಜ್ಞಾನವನ್ನು ಸೂಚಿಸುತ್ತದೆ. ಗಣೇಶ ಚತುರ್ಥಿಯ ಹಿನ್ನೆಲೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಮೂರ್ತಿಯನ್ನು ನೀರಿನಲ್ಲಿ ಏಕೆ ವಿಸರ್ಜನೆ ಮಾಡಲಾಗುತ್ತದೆ? ಮತ್ತು ಅದರಿಂದ ಪರಿಸರಕ್ಕೆ ಹೇಗೆ ಲಾಭ ಅಥವಾ ಹಾನಿ ಉಂಟಾಗುತ್ತದೆ ಎಂದು ತಿಳಿಯೋಣ.  


ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ತುಂಬಾ ಸಂತೋಷದಿಂದ ಅಲಂಕಾರ ಮಾಡಿ ಸಂಭ್ರಮದಿಂದ ತರುತ್ತೇವೆ. ನಂತರ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಮಾಡಿ ಹಬ್ಬ ಆಚರಿಸಿ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೆ. ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಲು ಕಾರಣವೇನೆಂದರೆ, ನೀರು ಅನಂತದ ಸಂಕೇತ.  ಸಮುದ್ರಕ್ಕೆ ಕೊನೆ ಇಲ್ಲ. ಮೂರ್ತಿಯನ್ನು ನೀರಲ್ಲಿ ಮುಳುಗಿಸಿದ ಮೇಲೆ ವಿನಾಯಕನು ಸ್ವರ್ಗದ ಕಡೆಗೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಹಾಗೆಯೇ ಈ ಆಚರಣೆಯು ಜನನ- ಜೀವನ- ಮರಣದ ಚಕ್ರವನ್ನು ಕೂಡ ಸೂಚಿಸುತ್ತದೆ. 


ವಿನಾಯಕನ ಮೂರ್ತಿಯನ್ನು ಹಳೆಯ ಜೇಡಿಮಣ್ಣಿನಿಂದ ಮಾಡಲಾಗುತ್ತದೆ. ಗಣಪತಿಯ ಮೂರ್ತಿಯನ್ನು ವಿಸರ್ಜಿಸುವ ಮೊದಲು ಅದಕ್ಕೆ ಅರಿಶಿಣ ಹಚ್ಚಿರುತ್ತಾರೆ ಮತ್ತು ನಾನ ರೀತಿಯ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ನಂತರ ಮೂರ್ತಿಯನ್ನು ನೀರಿನಲ್ಲಿ ಬಿಟ್ಟಾಗ ಅರಿಶಿಣ ಮತ್ತು ಹೂಗಳಲ್ಲಿರುವ ಔಷಧೀಯ ಗುಣಗಳು ಜಲಚರ ಪ್ರಾಣಿಗಳಿಗೆ ಸಿಗುತ್ತದೆ. 


ಆದರೆ ಈಗಿನ ಜನರು ರಾಸಾಯನಿಕ ಬಣ್ಣಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಿ ಮೂರ್ತಿಗಳನ್ನು ತಯಾರಿಸುತ್ತಾರೆ. ಇದು ಪರಿಸರಕ್ಕೆ ಹಾನಿಕಾರಕ. ಈ ವಸ್ತುಗಳು ನೀರಿನಲ್ಲಿ ಕರಗದೇ ನೀರಿನಲ್ಲಿರುವ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಅಲ್ಲದೆ ಇದು ಜಲಮಾಲಿನ್ಯವನ್ನೂ ಉಂಟುಮಾಡುತ್ತದೆ. ಇದರಿಂದಾಗಿ ನೀರಿನಲ್ಲಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಜಲಚರಗಳ ಬದುಕಿಗೆ ತೊಂದರೆಯಾಗುತ್ತದೆ. ಆದರೆ ಜೇಡಿಮಣ್ಣಿನ ಗಣೇಶನ ಮೂರ್ತಿಗಳನ್ನು ಬಳಸುವುದರಿಂದ ಅವುಗಳನ್ನು ಮಣ್ಣಿನಲ್ಲಿ ಹೂಳಬಹುದು ಅಥವಾ ನಗರಸಭೆಯಿಂದ ಗೊತ್ತುಪಡಿಸಿದ ಸ್ಥಳಗಳಲ್ಲಿ ವಿಸರ್ಜಿಸಬಹುದು. ನಾವು ಯಾವತ್ತಿಗೂ ಪರಿಸರ ಸ್ನೇಹಿಯಾಗಿ ಗಣೇಶನ ಮೂರ್ತಿಯನ್ನು ಮಾಡಿ ಹಬ್ಬವನ್ನು ಆಚರಿಸಬೇಕು. ಇದರಿಂದ ವಿನಾಯಕನೊಂದಿಗೆ ಪ್ರಕೃತಿಗೂ ಸಂತೃಪ್ತಿಯಾಗುತ್ತದೆ.


- ಹರ್ಷಿಣಿ ಕಾಂಚನ, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top