ಅಡ್ಯನಡ್ಕ: ಸಿ.ಇ.ಟಿ ಮತ್ತು ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಅಗತ್ಯ ಮತ್ತು ಸಿದ್ಧತೆಗಳು ಎಂಬ ವಿಷಯದ ಬಗ್ಗೆ ಇಂದು (ಆ.8) ಅಡ್ಯನಡ್ಕದ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿಯವರು ಮಾಹಿತಿ ನೀಡಿದರು.
ತಮ್ಮ ಅಭಿರುಚಿಗೆ ಅನುಗುಣವಾದ ವಿದ್ಯಾಭ್ಯಾಸ ಮತ್ತು ವೃತ್ತಿಯನ್ನು ಪಡೆಯಬೇಕಾದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಪಿಯು ವಿದ್ಯಾಭ್ಯಾಸದ ಜೊತೆಜೊತೆಗೆ ಸಿಇಟಿ, ನೀಟ್, ಜೆಇಇ,ಬಿ ಆರ್ಕ್, ಎನ್ ಡಿ ಎ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಮಾಹಿತಿ ಮತ್ತು ಅದಕ್ಕೆ ಬೇಕಾದ ತಯಾರಿ ಮಾಡಬೇಕಾದ ಅಗತ್ಯವನ್ನು ವಿವರಿಸಿದರು.
ಕಾಲೇಜಿನ ಉಪನ್ಯಾಸಕರಾದ ಗಣೇಶ್ ರೈ ಜೆ ಎನ್, ಸಂತೋಷ್ ವಿ ಕೆ, ಗಣೇಶ್ ಕೆ ಆರ್, ಸೋಮಶೇಖರ್ ಎಚ್, ಸುರೇಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರವಿಕುಮಾರ್ ಆರ್ ಎಸ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿಗಳು ಹಾಗೂ ಉಪಾನ್ಯಾಸಕರು ಜನತಾ ದರ್ಪಣ ಹಾಗೂ ಸ್ಮರಣಿಕೆಯನ್ನು ನೀಡಿದರು. ಗಣೇಶ್ ಕೆ ಆರ್ ಇವರ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







