ಸಾಗರ: ರಾಮಚಂದ್ರಾಪುರ ಮಠ ಎಂದರೆ ಅದು ಧಾರ್ಮಿಕ ವೈಭವದ ಸಂಕೇತ ಎಂದು ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸೆಪ್ಟೆಂಬರ್ 20 ರಿಂದ ಸಾಗರದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆರಂಭಗೊಳ್ಳುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದ ಸಂಪರ್ಕ ಕೇಂದ್ರವನ್ನು ಸಾಗರದ ಜಗದೀಶ್ ಒಡೆಯರ್ ಮನೆಯ ಮಹಡಿಯ ಸಭಾಂಗಣದಲ್ಲಿ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಸಮಷ್ಠಿ ಸಮಾಜವನ್ನು ಒಳಗೊಂಡು ಕಾರ್ಯಕ್ರಮ ರೂಪಿಸುವ ಶ್ರೀಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನಮಗೂ ಭಾಗ್ಯ ಎಂದ ಅವರು ಈ ಬಾರಿ ಸಾಗರದಲ್ಲಿ ಶ್ರೀಮಠದಿಂದ ನಡೆಯುವ ಈ ಕಾರ್ಯಕ್ರಮ ಸಾಗರಕ್ಕೊಂದು ಸಂಭ್ರಮದ ಕ್ಷಣ ನಾವುಗಳೆಲ್ಲ ಸಂತೋಷದಿಂದ ಭಾಗವಹಿಸುವ ಜತೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು.
ನಗರಸಭೆಯ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಮಾತನಾಡಿ, ನವರಾತ್ರಿ ಉತ್ಸವ ನಮ್ಮ ಸಂಸ್ಕøತಿಯ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಒಂದು, ಅಂತಹ ಉತ್ಸವ ಸಾಗರದಲ್ಲಿ ರಾಮಚಂದ್ರಪುರ ಮಠದಿಂದ ನಡೆಯುತ್ತಿರುವುದು ಸಂತಸದ ಸಂಗತಿ ನಗರ ಸಭೆಯೂ ಅದರ ಯಶಸ್ಸಿನಲ್ಲಿ ಭಾಗವಾಗಲಿದೆ ಎಂದರು.
ಶ್ರೀಮಠದ ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ್ ಭೀಮನಕೋಣೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಭಟ್, ಕೆ.ಜಿ.ಜಗದೀಶ್ ಒಡೆಯರ್, ಮಾರ್ಗದರ್ಶಕರಾದ ಹರನಾಥರಾವ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಕ್ರಿಯಾ ಸಮಿತಿಯ ಸಂಚಾಲಕ ಮುರಳಿ ಗೀಜಗಾರು, ಹವ್ಯಕ ಮಹಾಮಂಡಲದ ಧರ್ಮಭಾರತಿ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ರುಕ್ಮಾವತಿ ರಾಮಚಂದ್ರ, ಶಿವರಾಮಯ್ಯ, ಶಾಂತಲಾ ಭಾಸ್ಕರ್, ಗುರುಪ್ರಸಾದ್ ಐಸಿರಿ, ನಾರಾಯಣ ಖಂಡಿಕಾ, ಶ್ರೀನಾಥ ಸಾರಂಗ ಮತ್ತಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







