ಸತ್ಯವೇ ಗೆಲ್ಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು
ಟಿವಿಯಲ್ಲಿ, ಜಾಲತಾಣಗಳಲ್ಲಿ, ಧರ್ಮಸ್ಥಳ ವಿರೋಧಿ ಗ್ಯಾಂಗಿನ ರೋಚಕ ಷಡ್ಯಂತ್ರ ಕಳಚಿ ಬೀಳುತ್ತಿರುವ ಸುದ್ಧಿ ಪ್ರಸಾರದ ನೋಡುವಿಕೆಯ ಮಧ್ಯೆ, ಜಾಹೀರಾತಿನ ಬ್ರೇಕ್ ಸಂದರ್ಭದಲ್ಲಿ ಈ ಹಾಡನ್ನು ನೆನಪು ಮಾಡಿಕೊಳ್ಳೋಣ!!:
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನ್ನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ
ಧರ್ಮಪಾಲ ದಯಾಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ
ಅಣ್ಣಪ್ಪ ಗುರುವೆ ನಿನ್ನಗೆ ಶರಣು ಎನ್ನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ
ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೇ ಗೆಲ್ಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು
ಈ ಸುಂದರ ಭಕ್ತಿ ಗೀತೆಯ ರಚನೆ ಯಾರದ್ದು ಅಂತ ಗೊತ್ತಿಲ್ಲ. ರಚನೆಕಾರರಿಗೂ ಒಂದು ನಮಸ್ಕಾರ ಹೇಳುವ.
**
ಗಣಪತಿ ಉತ್ಸವದಲ್ಲಿ, ರೇಡಿಯೋಗಳಲ್ಲಿ, ಬೆಳಗಿನ ಹೊತ್ತು ಖಾಸಗಿ ಬಸ್ಸುಗಳಲ್ಲಿ, ದೇವಾಸ್ಥಾನಗಳಲ್ಲಿ... ಈ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇವೋ ಲೆಕ್ಕವಿಲ್ಲ.
ನಮಗೆ ಅರಿವಿಲ್ಲದೇ ಕಂಠಪಾಟ ಆಗುವಷ್ಟು ಈ ಹಾಡು ನಮ್ಮ ಒಳಗೆ ನಿಂತಿದೆ.
ಬೆಳಗ್ಗೆ ಒಮ್ಮೆ ಕೇಳಿದರೆ, ಇಡೀ ದಿನ ಗುನುಗುತ್ತಿರುವಂತೆ ಮಾಡುವ ಹಾಡುಗಳಲ್ಲಿ ಇದೂ ಒಂದು ಹಾಡು.
ಈ ಹಾಡಿನ ಸಾಲುಗಳ ಪ್ರಬಲ ತತ್ವಗಳನ್ನು ನಂಬಿದ್ದ ನಮ್ಮನ್ನು, ಕೆಲವು ಧರ್ಮ ವಿರೋಧಿ ಯೂಟ್ಯೂಬರ್‌ಗಳು, ಪುಂಖಾನುಪುಂಖವಾಗಿ ಮಾಡಿದ ಸುಳ್ಳು ಭಾವನಾತ್ಮಕ ವೀಡಿಯೋಗಳಿಂದ, ಒಮ್ಮೆ ಅಲ್ಲಾಡುವಂತೆ ಮಾಡಿದರಲ್ಲ!! ಮತ್ತೆ ನಮ್ಮಲ್ಲಿ ಕೆಲವರು ಅಲ್ಲಾಡುವಂತೆ ಆದೆವೆಲ್ಲ!!
ಬಿಡಿ, ಅಂತೂ ಧರ್ಮ ವಿರೋಧಿಗಳ ಷಡ್ಯಂತ್ರ ಕಳಚಿ ಬೀಳ್ತಾ ಇದೆ.
ದಿನ ಕಳೆದಂತೆ ಮತ್ತೊಂದು ಮುಖವಾಡದೊಂದಿಗೆ, ಮತ್ತೊಂದು ಸುಳ್ಳು ಕತೆಯೊಂದಿಗೆ, ಮತ್ತೊಂದು ಧಾರ್ಮಿಕ ಕ್ಷೇತ್ರದ ಬುಡಕ್ಕೆ ಕೈ ಹಾಕುವ, ಅಲ್ಲಾಡಿಸುವ, ತೋಡುವ, ಕೆದಕುವ ಧರ್ಮ ವಿರೋಧಿ ರಾಕ್ಷಸರು ಇದ್ದೇ ಇರುತ್ತಾರೆ.
ಈ ಬಗ್ಗೆ ಒಂದು ಸಣ್ಣ ಎಚ್ಚರಿಕೆ ನಮ್ಮ ಒಳಗಿರುವಂತೆ ದೇವರೇ ನಮಗೆ ಅನುಗ್ರಹಿಸಲಿ.
ಹಾಗೆ ಅನುಗ್ರಹಿಸುತ್ತ ನಮ್ಮ ಮನದ ಗುಡಿಯಲ್ಲಿ ವಾಸ ಮಾಡಲಿ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ