ಪುತ್ತೂರಿನಲ್ಲಿ ಈ ಬಾರಿ ಓಣಂ ಔತಣ; ಹೋಮ್‌ಲೀ ಬೈಟ್ಸ್‌ನಿಂದ ಆಯೋಜನೆ

Upayuktha
0



ಪುತ್ತೂರು: ಪುತ್ತೂರಿನ ಹೋಮ್‌ಲಿ ಬೈಟ್ಸ್‌ ಸಂಸ್ಥೆ  ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ 25 ಬಗೆಯ ಖಾದ್ಯಗಳಿರುವ ಓಣಂ ಸದ್ಯ (ಓಣಂ ಹಬ್ಬದ ಪ್ರಯುಕ್ತ ವಿಶೇಷ ಔತಣ) ಏರ್ಪಡಿಸುತ್ತಿದೆ. ಸೆಪ್ಟೆಂಬರ್ 5ರಂದು ಮಧ್ಯಾಹ್ನ 12ರಿಂದ ಅಪರಾಹ್ನ 2:30ರ ವರೆಗೆ ಪುತ್ತೂರಿನ ಜೈನಭವನದಲ್ಲಿ ಈ ಸಮಾರಂಭ ನಡೆಯಲಿದೆ.


ಸೀಮಿತ ಸಂಖ್ಯೆಯ ಕೂಪನ್‌ಗಳು ಮಾತ್ರ ಲಭ್ಯವಿರುವುದರಿಂದ ಆಸಕ್ತರು ಸಾಕಷ್ಟು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸೂಕ್ತ. ಜಿಪೇ ಮೂಲಕ ಮುಂಗಡವಾಗಿ ಪಾವತಿಸಿ ಸೀಟು ಕಾಯ್ದಿರಿಸಬಹುದು; ಜತೆಗೆ ಹೋಮ್‌ಲಿ ಬೈಟ್ಸ್‌ ವಾಟ್ಸ್‌ ಆಪ್‌ ನಂಬರ್ ಗೆ ಪಾವತಿಸಿದ ಮೊತ್ತದ ಸ್ಕ್ರೀನ್‌ಶಾಟ್ ಕಳುಹಿಸಿ ಕೂಪನ್ ಪಡೆದುಕೊಳ್ಳಬಹುದಾಗಿದೆ.


ಸೆ.4ರಂದು ಬೆಳಗ್ಗೆ 10:00 ಗಂಟೆಗೆ ಮೊದಲು 9740781054 ಸಂಖ್ಯೆಗೆ ಜಿ-ಪೇ ಮೊತ್ತವನ್ನು ಕಳುಹಿಸುವ ಮೂಲಕ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. 


ಪ್ರತಿ ಭೋಜನಕ್ಕೆ  280 ರೂ ನಿಗದಿಪಡಿಸಲಾಗಿದ್ದು, ಅರ್ಧ ಊಟಕ್ಕೆ (ಹಾಫ್‌ ಮೀಲ್‌) 150 ರೈ ನಿಗದಿಪಡಿಸಲಾಗಿದೆ. 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೌಂಟರ್‍‌ನಲ್ಲೇ ಕೂಪನ್‌ ಪಡೆದುಕೊಳ್ಳಬಹುದಾಗಿದೆ.



********


ಹೋಮ್‌ಲಿ ಬೈಟ್ಸ್- ಕಳೆದೆರಡು ವರ್ಷದಿಂದ ಶುದ್ಧ ಹಾಗೂ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು ಜನ ಮನ್ನಣೆ ಗಳಿಸಿದೆ. ಇದೀಗ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಓಣಂ ಹಬ್ಬದ ಪ್ರಯುಕ್ತ ಈ ಸಮಾರಂಭ ಆಯೋಜಿಸಿದೆ.


ನೆರೆ ರಾಜ್ಯ ಕೇರಳದಲ್ಲಿ ಜಾತಿ, ಮತ, ರಾಜಕೀಯ ಬೇಧ ಇಲ್ಲದೆ ಬಹಳ ಮುಖ್ಯವಾಗಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ ಪುತ್ತೂರಲ್ಲಿ ಎಲ್ಲರಿಗೂ ಮುಕ್ತವಾಗಿ ಬಾಳೆ ಎಲೆಯಲ್ಲಿ ಕಾಳನ್, ಓಲನ್, ಅಡ ಪ್ರಥಮನ್ ಇತ್ಯಾದಿ 25 ಮಿಕ್ಕಿ ಸಾಂಪ್ರದಾಯಿಕ ಪದಾರ್ಥಗಳೊಂದಿಗೆ ಓಣಂ ಸದ್ಯ! ಪ್ರಸ್ತುತ ಪಡಿಸುತ್ತಿದೆ.

 

ತಿರುವೋಣಂ ದಿನ ಸೆಪ್ಟೆಂಬರ್ 5, ಶುಕ್ರವಾರದಂದು, ಪುತ್ತೂರಿನ ಜೈನ ಭವನದಲ್ಲಿ ಓಣಂ ಸದ್ಯ.

ಸಮಯ: ಮಧ್ಯಾಹ್ನ 12 ರಿಂದ 2:30


ಮುಂಗಡ ಬುಕ್ಕಿಂಗ್ ಮೂಲಕ ಊಟದ ವ್ಯವಸ್ಥೆ ಆಯೋಜಿಸಲಾಗಿದ್ದು, homelybites.co.in ಎಂಬ ವೆಬ್ಸೈಟ್ ಅಥವಾ ಫೇಸ್ಬುಕ್ ಪೇಜ್ ಲೀ ಕಾದಿರಿಸಿ.


ಬನ್ನಿ ಓಣಂ ಹಬ್ಬವನ್ನು ರುಚಿಯನ್ನು ಸವಿಯುತ್ತಾ ಆಚರಿಸೋಣ. ಊಟದ ನಂತರ ಮನೆಗೆ ಕೊಂಡೊಯ್ಯಲು ಪಾಯಸ, ವಿವಿಧ ತರದ ತಿಂಡಿ ತಿನಿಸುಗಳ ಪ್ರತ್ಯೇಕವಾಗಿ ಕೌಂಟರ್ ಕೂಡ ಇರುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top