ಹಲೋ, ಹೇಗಿದ್ದೀರಾ?
ಪ್ರತಿಯೊಬ್ಬರ ಜೀವನದ ಪಥ ಬೇರೆಯೇ ಇರುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆಸೆ, ಆಕಾಂಕ್ಷೆ ಮತ್ತು ಅವುಗಳನ್ನು ಈಡೇರಿಸಿಕೊಳ್ಳಲು ತಮ್ಮದೇ ಆದ ತಂತ್ರ ಅನುಸರಿಸುತ್ತಾರೆ.
ಆದರೆ ನಮ್ಮ ಜೀವನದಲ್ಲಿ decision making ನಮ್ಮ ಪಾತ್ರ ಇದ್ದರೆ ಒಳ್ಳೆಯದು. ಅದು ನಮ್ಮ ಮನೋಭಾವದ ಮೇಲೆ ನಿರ್ಧರಿತ ಆಗಿರುತ್ತದೆ. ನಮ್ಮ ಜೀವನದಲ್ಲಿ ನಮ್ಮ ಚುಕ್ಕಾಣಿ ನಮ್ಮ ಕೈಯಲ್ಲಿ ಇದ್ದರೆ ನಾವು ಪ್ರತಿ ಸೋಲಿನಿಂದ ಪಾಠ ಕಲಿಯುತ್ತಾ ನಮ್ಮ ಗೆಲುವಿನ ಕಡೆಗೆ ನಮ್ಮ ಜೀವನವನ್ನು ನಡೆಸುತ್ತೇವೆ. ಆದರೆ ನಮ್ಮ ಜೀವನದಲ್ಲಿ ಬೇರೆಯವರ ಪಾತ್ರ ಅಧಿಕವಾಗಿದ್ದರೆ ನಮ್ಮ ವಾಹನದ ಸ್ಟಿಯರಿಂಗ್ ಬೇರೆ ಕೈಯಲ್ಲಿದ್ದರೆ ನಮ್ಮ ಜೀವನದ ಸ್ಕ್ರಿಪ್ಟ್ ಗೆ ಬೇರೆಯವರು ಆಕ್ಷನ್ ಕಟ್ ಹೇಳುವಂತಾದರೆ ನಮ್ಮ ಜೀವನ ಬಿರುಗಾಳಿಗೆ ಸಿಕ್ಕ ಹಡಗಿನಂತೆ ಆಗುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಇಂಗ್ಲೀಷಿನಲ್ಲಿ Don't keep your key of happiness in others pocket. ಎಂದು ಹೇಳಲಾಗುತ್ತದೆ.
ನಮ್ಮ ಜೀವನವೆಂಬ ವಾಹನಕ್ಕೆ ನಮ್ಮ ಮನೋಭಾವವೇ ಇಂಜಿನ್ ಇದ್ದ ಹಾಗೆ. ಇದನ್ನು attitude ಎಂದೂ ಸಹ ಕರೆಯಲಾಗುತ್ತದೆ.ನಮ್ಮ ಆಸೆ, ಕನಸುಗಳು, ಗುರಿ ಇವೆಲ್ಲವೂ ಕಂಪಾರ್ಟ್‌ಮೆಂಟ್ ಇದ್ದ ಹಾಗೆ. ಇವೆಲ್ಲ ಇದ್ದ ಮೇಲೆ ಸ್ಟಿಯರಿಂಗ್ ನಮ್ಮ ಕೈಯಲ್ಲಿ ಇದ್ದರೆ ಒಳ್ಳೆಯದು ತಾನೇ?
ಅದಕ್ಕೆ ಭಗವದ್ಗೀತೆಯಲ್ಲಿ ಕೃಷ್ಣ ಉದ್ದರೇದಾತ್ಮಾನಮ್ ಎಂದು ಹೇಳಿದ್ದಾನೆ. ಅಂದರೆ ನಮ್ಮ ಜೀವನದ ಆಗುಹೋಗುಗಳು ನಮ್ಮ ಕೈಯ್ಯಲ್ಲಿ ಇವೆ ಎಂದರ್ಥ.
Your situation is nothing, Your response is everything. ಇದು ನಮ್ಮ ಪ್ರತಿಕ್ರಿಯೆಗಳ ಮಹತ್ವವನ್ನು ತೋರಿಸುತ್ತದೆ.
ಯಾವುದೇ ವ್ಯಕ್ತಿ ನಮ್ಮ ಜೀವನದಲ್ಲಿ ಬಂದು ನಮ್ಮ ಉದ್ಧಾರ ಮಾಡುತ್ತಾನೆಂದು ಬಯಸುವುದು ನಮ್ಮ ಭ್ರಮೆ ಅಷ್ಟೇ, ಉತ್ತಮ ಬಾಂಧವ್ಯ ಇದ್ದರೆ ಕಂಡಕ್ಟರ್ ಆಗಬಹುದು, ಆದರೆ ಡ್ರೈವರ್ ಸೀಟಿನಲ್ಲಿ ಕುಳಿತುಕೊಳ್ಳುವುದು ನಾವೇ ಅಲ್ಲವೇ.
ಜೀವನವೆಂಬ ಹೆದ್ದಾರಿಯಲ್ಲಿ ವಿಧಿ ಎಂಬ ಟ್ರಾಫಿಕ್ ಇನ್ಸ್ಪೆಕ್ಟರ್ ನಿಂತಿದ್ದರೆ, ನಮ್ಮ ಗಾಡಿಗೆ ನಮ್ಮ ಜೀವನವನ್ನು ಆಕ್ಸಿಡೆಂಟ್ ಆಗದಂತೆ ಡ್ರೈವ್ ಮಾಡಿ ನಮ್ಮ ಗಮ್ಯ ಎಂಬ destination ಮುಟ್ಟಿ ಜೈ ಅಂದು ಬಿಡೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


