ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ಡೈಮಂಡ್ ಫೆಸ್ಟ್‌ ಆಗಸ್ಟ್ 7ರಿಂದ

Chandrashekhara Kulamarva
0



ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ಈ ಬಾರಿಯ ಡೈಮಂಡ್‌ ಫೆಸ್ಟ್ ಆಗಸ್ಟ್‌ 7ರಿಂದ ಪ್ರಾರಂಭವಾಗಲಿದೆ.


ವೈವಿಧ್ಯಮಯ ಹಾಗೂ ವಿಶಾಲ ಶ್ರೇಣಿಯ ವಜ್ರಾಭರಣಗಳು, ಕೊನೆಯಿಲ್ಲದ ಸಂಭ್ರಮಕ್ಕೆ ಸೂಕ್ತವಾದ ಆಯ್ಕೆಗಳು ಡೈಮಂಡ್ ಫೆಸ್ಟ್‌ನ ವೈಶಿಷ್ಟ್ಯವಾಗಿದ್ದು, ಮನಮೋಹಕ, ಆಕರ್ಷಕ ವಜ್ರಾಭರಣಗಳು ಕೇವಲ 3,900 ರೂ.ಗಳಿಂದ ಪ್ರಾರಂಭವಾಗುತ್ತವೆ.


ಅಮೂಲ್ಯ ಹಾಗೂ ಕಿಸ್ನ ಶ್ರೇಣಿಯ ಆಭರಣಗಳಿದ್ದು, ಗ್ರಾಹಕರ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿದೆ. ಹಳೆಯ ಆಭರಣಗಳಿಗೆ ಶೇ 95ರಷ್ಟು ವಿನಿಮಯ ಮೌಲ್ಯ ನೀಡಲಾಗುತ್ತಿದ್ದು, ಮರು ಖರೀದಿಗೆ ಶೇ 90ರಷ್ಟು ಮೌಲ್ಯವನ್ನು ನೀಡಲಾಗುತ್ತದೆ.


ಗ್ರಾಹಕರು ಈ ಉತ್ಸವದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ ಪ್ರಕಟಣೆ ತಿಳಿಸಿದೆ.


ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮ ಇಂದು ಸಂಜೆ 4:30ಕ್ಕೆ ನಡೆಯಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಸೇಂಟ್ ಫಿಲೋಮಿನಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಭಾರತಿ ಎಸ್ ರೈ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top