'ಶ್ರೀರಾಮ ನಿರ್ಯಾಣ' ಪ್ರದರ್ಶನ: ಸರಯೂ ಯಕ್ಷ ಬಳಗಕ್ಕೆ ಬಹುಮಾನ

Chandrashekhara Kulamarva
0


ಮಂಗಳೂರು: ಇತ್ತೀಚೆಗೆ ಕಿನ್ನಿಗೋಳಿಯ ಯಕ್ಷಲಹರಿಯ 35ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಹವ್ಯಾಸಿ ಕಲಾವಿದರಿಗಾಗಿ ನಡೆಸಿದ ಸ್ಪರ್ಧಾ ಸಪ್ತಾಹದಲ್ಲಿ ಕೋಡಿಕಲ್ ನ ಸರಯೂ ಯಕ್ಷ ಬಳಗವು "ಶ್ರೀ ರಾಮ ನಿರ್ಯಾಣ" ಪ್ರಸಂಗವನ್ನು ಪ್ರಸ್ತುತಪಡಿಸಿ ತೃತೀಯ ಬಹುಮಾನವನ್ನು ಪಡೆದುಕೊಂಡಿತು. ವರ್ಕಾಡಿ ರವಿ ಅಲೆವೂರಾಯ ನೇತೃತ್ವ ವಹಿಸಿದ ಈ ತಂಡದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ, ವಿಜಯಲಕ್ಮೀ ಯಲ್. ನಿಡ್ವಣ್ಣಾಯ, ಡಾ. ಸುಮನಾ ಯಸ್. ಹೊಳ್ಳ, ಸಿ. ಎ. ವೃಂದಾ ಎಂ. ಕೊನ್ನಾರ್, ಅಕ್ಷಯ್ ಸುವರ್ಣ, ನಿಹಾಲ್ ಪೂಜಾರಿ, ದೃಶಾಲ್ ಪೂಜಾರಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top