ನಮ್ಮ ಐತಿಹಾಸಿಕ ಪರಂಪರೆಯ ಅರಿವು ನವಪೀಳಿಗೆಗೆ ಅಗತ್ಯ: ಮಲ್ಯಾಡಿ ಪ್ರಭಾಕರ ಶೆಟ್ಟಿ

Upayuktha
0


ದಾವಣಗೆರೆ: ನಮ್ಮ ದೇಶದ ಸ್ವಾತಂತ್ರ್ಯ 8ನೇ ದಶಮಾನಕ್ಕೆ ಕಾಲಿಡುತ್ತಿದ್ದೇವೆ. ಭಾರತ ದೇಶದ ಐತಿಹಾಸಿಕ ಪರಂಪರೆಯನ್ನು ನವಪೀಳಿಗೆಗಳಿಗೆ ಅರಿವು ಮೂಡಿಸಬೇಕಾಗಿದೆ ನಮ್ಮ ನಿಮ್ಮೆಲ್ಲರ ದೇಶ ಭಕ್ತಿ ಮನದಾಳದಲ್ಲೇ ಇರಬೇಕು ಎಂದು ಯಕ್ಷರಂಗ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿಯವರು ಕಲಾಕುಂಚ ಕಛೇರಿಯ ಹೊರಾಂಗಣದಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ನಮ್ಮ ದೇಶ ನಮ್ಮ ನವ ಭಾರತದ ಹೊಸ ಹೊಸ ಪರಿಕಲ್ಪನೆ ಅಭಿವೃದ್ಧಿ ವೈಭವೀಕರಣ ಯಾವ ದೇಶದಲ್ಲಿ ಆಗುತ್ತಿಲ್ಲ ಅದು ನಮ್ಮ ನಿಮ್ಮೆಲ್ಲರಿಗೂ ಸಂತೋಷದ ವಿಚಾರ ಎಂದರು.


ಕಲಾಕುಂಚ ಮಹಿಳಾ ವಿಭಾಗದ ಸಮೂಹದವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ವೈಭವೀಕರಣ ಸಮಾರಂಭಕ್ಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಸ್ವಾಗತಿಸಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ದಂಪತಿಯರು, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಸಮಾನ ಮನಸ್ಕರ ವೇದಿಕೆಯ ಸಂಸ್ಥಾಪಕರಾದ ಅಬ್ದುಲ್ ಸತ್ತಾರ್‍ಸಾಬ್, ಖಜಾಂಚಿ ಎಂ.ಎಸ್.ಪ್ರಸಾದ್, ಎಂ.ಸಿ.ಸಿ.`ಎ’ ಬ್ಲಾಕ್ ಅಧ್ಯಕ್ಷರಾದ ಪ್ರಭಾ ರವೀಂದ್ರ, ಲೀಲಾ ಸುಭಾಸ್, ಲಕ್ಷ್ಮೀ ಸುರೇಶ್, ಶ್ರೀಮತಿ ಚಂದ್ರಶೇಖರ ಅಡಿಗ, ಶ್ರೀಮತಿ ಮುಕ್ತಾ ಶ್ರೀನಿವಾಸ ಪ್ರಭು, ಶ್ರೀಮತಿ ಜಿ.ಶಿವರುದ್ರಮ್ಮ ಕಲ್ಲಿಂಗಪ್ಪ, ಶ್ರೀಮತಿ ಸ್ವರ್ಣಲತಾ, ಗುರುಪಾದ ಬಾಬು ರಾಯಬಾಗ ಮುಂತಾದವರು ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top