ತಿರುವನಂತಪುರದಲ್ಲಿ ಆಗಸ್ಟ್ 23ರಂದು "ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ"

Upayuktha
0



ಕಲಬುರಗಿ: ಕರ್ನಾಟಕ ಗಡಿ ಪ್ರದೇಶಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಆಗಸ್ಟ್ 23 ರಂದು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವವನ್ನು ಸಂಭ್ರಮ ದಿಂದ ಆಯೋಜಿಸಲಾಗಿದೆ ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಎ. ಆರ್. ಸುಬ್ಬಯ್ಯ ಕಟ್ಟೆ ತಿಳಿಸಿದ್ದಾರೆ.


ಆಧುನಿಕ ವೈಜ್ಞಾನಿಕ ಯುಗದಲ್ಲಿ ಜಗತ್ತು ಹತ್ತಿರವಾಗುತ್ತಿರುವಂತೆ ಸ್ಥಳೀಯ ಭಾಷೆ, ಸಂಸ್ಕೃತಿಗಳು ಜಾಗತೀಕರಣದ ಬಿರು ಬಿಸಿಲಿಗೆ ಇನ್ನಿಲ್ಲವಾಗುವ ಆತಂಕದ ಮಧ್ಯೆ ನಮ್ಮ ಮಣ್ಣಿನ ಸೊಗಡನ್ನು ಪರಸ್ಪರ ಹಂಚಿಕೊಳ್ಳುವ ವೇದಿಕೆಗಳಾಗಿ ಸಂಸ್ಕೃತಿ ಉತ್ಸವಗಳು ತನ್ನದೇ ಮಹತ್ವವ ನ್ನು ಹೊಂದಿದೆ ಎಂಬುದು ನಿಸ್ಸಂಶಯ. ವೈವಿಧ್ಯಮಯವಾದ ಬಹುತ್ವದ ಭಾರತೀಯ ಸಂಸ್ಕೃತಿಯೊಳಗಿನ ಭಿನ್ನ-ಭಿನ್ನ ಪರಂಪರೆ, ಜೀವನ ಕ್ರಮ, ಸಂಸ್ಕೃತಿಗಳು ಒಟ್ಟಂದದಲ್ಲಿ ಒಂದೇ ಮೂಲದವುಗಳಾಗಿದ್ದು, ಅವು ಪರಸ್ಪರ ಬೆಸೆದುಕೊಂಡಿರುವುದು ಏಕ ಸ್ವರೂಪದ ಚಿಂತನೆ, ಬಹುರೂಪದಲ್ಲೂ ಏಕರೂಪದ ಸಂಸ್ಕೃತಿಕ ಹಿನ್ನೆಲೆಯಿಂದಲೇ.


ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಕೇರಳ ಸರ್ಕಾರದ ಜಂಟಿ ಆಶ್ರಯದಲ್ಲಿ ಆಗಸ್ಟ್ 23 ರಂದು ಶನಿವಾರ ಬೆಳಿಗ್ಗೆ 9 ರಿಂದ ತಿರುವನಂತಪುರಂ ತೈಕ್ಕಾಡಿನಲ್ಲಿರುವ ಭಾರತ್ ಭವನ ಸಭಾಂಗಣದಲ್ಲಿ 'ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.


ಅಂದು ಬೆಳಿಗ್ಗೆ 9.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಳಿಕ ಬೆಳಿಗ್ಗೆ 10.00 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ಕೇರಳ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ಉದ್ಘಾಟಿಸುವರು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುವರು.


ಭಾರತ್ ಭವನ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಹಿರಿಯ ವಿದ್ವಾಂಸ ವೀರಣ್ಣ ತುಪ್ಪದ, ಅಹಮ್ಮದಾಬಾದ್ ಕನ್ನಡ ಸಂಘದ ಅಧ್ಯಕ್ಷ ಹಣಮಂತ ಬೆನ್ನೂರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎಸ್.ಮದಭಾವಿ, ಅಶೋಕ ಚಂದರಗಿ, ಶಿವರೆಡ್ಡಿ ಖ್ಯಾಡೇದ, ತಿರುವನಂತಪುರ ಮಾದ್ವ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ರುಕ್ಮಿಣಿ ಕೆ., ಕಾರ್ಯದರ್ಶಿ ಡಾ.ಅನಿತಾ ಕುಮಾರಿ ಹೆಗಡೆ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಮಂಜುನಾಥ ಆಳ್ವ ಮಡ್ವ, ಕೇರಳ ಸರ್ಕಾರದ ನಿವೃತ್ತ ಅರ್ಡರ್ ಸೆಕ್ರಟರಿ ಗಣೇಶ್ ಪ್ರಸಾದ್ ಪಾಣೂರು, ಮಾದ್ವ ತುಳು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಕುಂಜುರಾಯ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಪತ್ರಕರ್ತ ರವಿ ನಾಯ್ಕಾಪು, ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸಾ ದುಬೈ, ಶಿವರಾಮ ಭಂಡಾರಿ ಮುಂಬೈ, ನಾಟಕ-ಸಿನಿಮಾ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ ಮಂಗಳೂರು, ತುಳು ಸಂಶೋಧಕ ಎಲ್.ಆರ್.ಪೋತ್ತಿ, ರಾಘವ ಚೇರಾಲು, ಶಿವಾನಂದ ಕೋಟ್ಯಾನ್ ಮಸ್ಕತ್ ಮುಖ್ಯ ಅತಿಥಿಗಳಾಗಿರುವರು.


ಈ ಸಂದರ್ಭ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಸಾಧಕರಿಗೆ ಗೌರವಾರ್ಪಣೆ ನಿರ್ವಹಿಸುವರು.


ಮಧ್ಯಾಹ್ನ 12 ಗಂಟೆಯಿಂದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಂಗಮ ನಡೆಯಲಿದೆ. ಎಡ್ವರ್ಡ್ ಲೋಬೋ ತೊಕ್ಕೋಟು, ಗಿರೀಶ್ ಪುಲಿಯೂರ್, ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಕವಿತಾ ಮಂಗಳೂರು, ಡಾ.ಹೆಚ್.ಪೂರ್ಣಿಮಾ ತಿರುವನಂತಪುರ, ಎನ್.ಡಿ.ರಾಜಾರಾಮ್ ತಿರುವನಂತಪುರ, ಸರಿತಾ ಮೋಹನ್ ಭಾಮ ತಿರುವನಂತಪುರ, ಡಾ.ಶೋಭನ್ ಕುಮಾರ್ ಕೊಂಪಳ್ಳಿ, ವಿಲ್ಸನ್ ಕಟೀಲು, ರಶೀದ್ ನಂದಾವರ, ಮೊಹಮ್ಮದ್ ಅಝೀಂ ಮಣಿಮುಂಡ, ಸಂಧ್ಯಾಗೀತ ಬಾಯಾರು, ಪುರುಷೋತ್ತಮ ಭಟ್.ಕೆ. ವಿವಿಧ ಭಾಷೆಗಳ ಕವನ ವಾಚಿಸುವರು.


1 ಗಂಟೆಯಿಂದ ಕನ್ನಡ, ಮಲೆಯಾಳಂತುಳು ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಪರಾಹ್ನ 2.00 ರಿಂದ ಬಹುಭಾಷಾ ಸಮಾಜದಲ್ಲಿ ಸಹಬಾಳ್ವೆ ಮತ್ತು ಸಂವಹನ ವಿಷಯದ ವಿಚಾರಗೋಷ್ಠಿಯಲ್ಲಿ ಸಾಹಿತಿ, ಸಂಶೋಧಕಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ಪ್ರೊ.ಎ.ಶ್ರೀನಾಥ್, ಅನಿರುದ್ಧನ್ ನಿಲಾಮೇಲ್, ಉದಿನೂರು ಮೊಹಮ್ಮದ್ ಕುಂಞÂ ವಿಷಯ ಮಂಡಿಸುವರು. ಬಳಿಕ 3 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸೋಮಣ್ಣ ಬೀವಿನಮರದ ಅಧ್ಯಕ್ಷತೆ ವಹಿಸುವರು. ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡುವರು. ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ಬರೆದ "ಗುರುದರ್ಶನ" ಕೃತಿಯನ್ನು ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಬಿಡುಗಡೆಗೊಳಿಸುವರು.


ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಭಗತ್ ರಾಜ್ ನಿಜಾಮಕರಿ, ಡಾ.ಸಂಜೀವ್ ಕುಮಾರ್ ಅತಿವಾಲೆ, ತಿರುವನಂತಪುರಂ ಕರ್ನಾಟಕ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್.ನಾಸಿ., ಯೋಜನಾ ವಿಜ್ಞಾನಿ ಡಾ.ಇಬ್ರಾಹಿಂ ಬಾತಿಸ್ ಕೆ., ಶಶಿಧರ ಶೆಟ್ಟಿ ಮುಟ್ಟ, ಕೆ.ಜಿ.ಕೆ.ಕಿಶೋರ್, ಪ್ರವೀಣ್ ಕುಮಾರ್ ಕೊಡಿಯಾಲಬೈಲು, ಸರಿನ್ ಮೊಹಮ್ಮದ್, ಅನಂತಪುರಿ ಗಡಿನಾಡ ಸಂಸ್ಕೃತಿ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯಕಟ್ಟೆ, ಝಡ್.ಎ. ಕಯ್ಯಾರ್, ರವಿ ನಾಯ್ಕಾಪು ಮುಖ್ಯ ಅತಿಥಿಗಳಾಗಿರುವರು.


ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೀರಗಾಸೆ, ಚಿಲಿಪಿಲಿ ಕುಣಿತ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಮೋಹಿನಿಯಾಟ್ಟಂ, ಭರತನಾಟ್ಯ, ಯಕ್ಷಗಾನ ಹಾಗೂ ಕಥಕ್ಕಳಿ ಪ್ರದರ್ಶನಗೊಳ್ಳಲಿದೆ ಎಂದು ಸುಬ್ಬಯ್ಯ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top