ದಾವಣಗೆರೆ ಗೌಡ ಸಾರಸ್ವತ ಸಮಾಜದ ಸುವರ್ಣ ಮಹೋತ್ಸವದ ಕಿರು ಇತಿಹಾಸ

Upayuktha
0



ದಾವಣಗೆರೆ: ದಾವಣಗೆರೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ 1974ರಲ್ಲಿ ಒಗ್ಗೂಡುವಿಕೆಯೊಂದಿಗೆ ಸಮಾಜ ಬಾಂಧವರೆಲ್ಲರೂ ನಮ್ಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯನ್ನು ಎಲ್ಲಾ ಹಬ್ಬ ಹರಿದಿನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಒಂದು ಅರ್ಧ ಶತಮಾನದ ಐತಿಹಾಸಿಕ ಪರಂಪರೆ.


ಕೀರ್ತಿಶೇಷರಾದ ಡಾ. ಆರ್.ಎನ್.ಶೆಣೈ, ಜಿ.ಪಿ. ಕಾಮತ್, ರಾಧಾಕೃಷ್ಣ ನಾಯಕ್, ಎಂ.ಜಿ.ಕಿಣಿ ಮುಂತಾದವರ ನೇತೃತ್ವದಲ್ಲಿ ಪ್ರಾರಂಭದಲ್ಲಿ ಶ್ರೀ ಗಣೇಶೋತ್ಸವವನ್ನು ಕೆನರಾ ಬ್ಯಾಂಕ್ ಸಭಾಂಗಣ, ಕಾಮತ್ ಹೋಟೆಲ್ ಸಭಾಂಗಣ, ಆರ್.ಹೆಚ್. ಚೌಟ್ರಿ ಸಭಾಂಗಣದಲ್ಲಿ ಅತೀ ವಿಜೃಂಭಣೆಯಿಂದ  ಅಚ್ಚುಕಟ್ಟಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತಿದ್ದು 1976ರಲ್ಲಿ ಈ ಸಮಾಜ ನೋಂದಣಿ (ರಿಜಿಸ್ಟ್ರೇಷನ್) ಆಯಿತು. ದಾವಣಗೆರೆಯ ಎಂ.ಸಿ.ಸಿ. `ಎ’ ಬ್ಲಾಕ್‍ನಲ್ಲಿ ವಿಶಾಲವಾದ ನಿವೇಶನದಲ್ಲಿ 1980 ರಲ್ಲಿ ಶ್ರೀ ಸುಕೃತೀಂದ್ರ ಕಲಾಮಂದಿರದ  ಕಟ್ಟಡಕ್ಕೆ ನೆಲಗಟ್ಟು ಹಾಕಲಾಯಿತು.

 

1982 ರಲ್ಲಿ ಈ ಕಲಾಮಂದಿರವನ್ನು ಶ್ರೀ ಕಾಶೀ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಅಂದಿನಿಂದ ಇಂದಿನವರೆಗೂ ಸಮಾಜದ ಮಹಿಳಾ ವಿಭಾಗವೂ ಸೇರಿದಂತೆ ಪ್ರತಿವರ್ಷ ನಿರಂತರವಾಗಿ ಶ್ರೀ ಗಣೇಶೋತ್ಸವ, ಚೂಡಿ ಪೂಜೆ, ಶ್ರೀ ದುರ್ಗಾ ನಮಸ್ಕಾರ, ದಸರಾ, ದೀಪಾವಳಿ, ಏಕಾದಶಿಗಳಲ್ಲಿ ಸಾಮೂಹಿಕ ಭಜನೆ, ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಯಜರುಪಾಕರ್ಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಕಾಳಜಿಯೊಂದಿಗೆ ವಿದ್ಯಾರ್ಥಿವೇತನ, ಕಾರ್ತಿಕ ಏಕಾದಶಿ, ಲಲಿತ ಸಹಸ್ರನಾಮ, ಅವಕಾಶ ವಂಚಿತ ಪ್ರತಿಭಾವಂತ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅವರಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿ, ಮುಕ್ತವಾದ ವೇದಿಕೆ ಕಲ್ಪಿಸುವ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರ. 



1996ರಲ್ಲಿ ಶ್ರೀ ವಿದ್ಯಾ ವಾದಿರಾಜ ತೀರ್ಥ ಸಭಾಂಗಣ ಕಲಾಮಂದಿರದ ಮೇಲ್ಭಾಗದಲ್ಲಿ ಶ್ರೀ ವಿಷ್ಣು ಪೈ, ದಿ|| ಎಂ.ಜಿ.ಕಿಣಿ ನೇತೃತ್ವದಲ್ಲಿ ಇನ್ನೊಂದು ಸಭಾಂಗಣ ಕಟ್ಟಿಸಿದರು. ಇತ್ತೀಚಿಗೆ ಶ್ರೀಮತಿ ಅಮಿತಾ ಡಾ|| ವೇಣುಗೋಪಾಲ್ ಪೈ ಅವರ ಅಧ್ಯಕ್ಷತೆಯಲ್ಲಿ ಕಲಾಮಂದಿರದ ನವೀಕರಣ ಸುಸಜ್ಜಿತವಾಗಿ ಹೊಂದಿದ್ದು, ಯಾವುದೇ ಸರ್ಕಾರದ, ಇಲಾಖೆಗಳ ಅನುದಾನವಿಲ್ಲದೇ ಸಾರ್ವಜನಿಕ ದೇಣಿಗೆ ಪಡೆಯದೇ ನಮ್ಮ ಸಮಾಜ ಬಾಂಧವರ ತನು-ಮನ, ಧನ, ಸಹಕಾರ ಸಹಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ ಸಭಾಂಗಣವಾಗಿದೆ. ಸುಮಾರು 40 ವರ್ಷಗಳ ಹಿಂದಿನ ಮೇಲಿನ ಸಭಾಂಗಣ ನವೀಕರಿಸಲು ಶತಪ್ರಯತ್ನದಿಂದ ಈಗಿನ ಸಮಿತಿ ಪ್ರಯತ್ನಿಸುತ್ತಿದೆ. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top