ಕಡಬ ತಾಲೂಕು ಪಂಚಾಯತ್‌ಗೆ ರಾಜ್ಯ ಮಾಹಿತಿ ಆಯೋಗದಿಂದ ಎಚ್ಚರಿಕೆ ನೋಟೀಸ್

Upayuktha
0



ಕಡಬ:  9/11 ಭೂಮಿಯ ದಾಖಲೆಗಳಿಗೆ ಸಂಬಂಧಿಸಿದಂತೆ ಕಡಬ ಸಮೀಪದ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿದ ಅರ್ಜಿಗೆ ಸಕಾಲದಲ್ಲಿ ಸ್ಪಂದನೆ ನೀಡದ ಕಡಬ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆ ನೀಡಿದೆ.


ಘಟನೆ ಏನು?

ಕಡಬ ತಾಲೂಕು ಪಂಚಾಯತ್ ಗೆ ವ್ಯಕ್ತಿಯೋರ್ವರು ಮಾಹಿತಿ ಹಕ್ಕು ಕಾಯ್ದೆಯನ್ವಯ ದಾಖಲೆಗಳನ್ನು ಕೋರಿ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದು, ಒಂದು ವರ್ಷಗಳ ಕಾಲ ಅದನ್ನು ನೀಡದೆ ವ್ಯವಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸತಾಯಿಸಿದ್ದರು. ಇದರ ವಿರುದ್ಧ ಅರ್ಜಿದಾರರು ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ರಾಜ್ಯ ಮಾಹಿತಿ ಹಕ್ಕು ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆ ನೀಡಿರುತ್ತದೆ. ಅಲ್ಲದೆ ಮುಂದಿನ ಬಾರಿ ದಂಡ ಹಾಗೂ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಕಡಬ ತಾಲೂಕು ಪಂಚಾಯತ್ ನ ಅಧಿಕಾರಿಗಳ ನಡವಳಿಕೆಗಳು, ಬೇಜವಾಬ್ದಾರಿ ನಡೆ ದಾಖಲೆಗಳ ಕುರಿತು ಅನುಮಾನಕ್ಕೆ ಕಾರಣವಾಗಿದೆ.






Post a Comment

0 Comments
Post a Comment (0)
To Top