ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ವನ ಜೀವನ ಯಜ್ಞ-2025

Upayuktha
0


ಧರ್ಮತ್ತಡ್ಕ: ಇಲ್ಲಿಗೆ ಸಮೀಪದ ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇದರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಜಂಟಿ ಆಶ್ರಯದಲ್ಲಿ ವನ ಜೀವನ ಯಜ್ಞ-2025(ಭವಿಷ್ಯದ ಹಸಿರಿಗಾಗಿ ಗಿಡ ನೆಡುವ ಕಾರ್ಯಕ್ರಮ) ಕಾರ್ಯಕ್ರಮ ಶನಿವಾರದಂದು (ಜು.19) ಬೆಳಿಗ್ಗೆ 9.30ರಿಂದ ಆಯೋಜಿಸಲಾಯಿತು.


ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಕ್ವೆ ಶಂಕರ್ ರಾವ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ 32 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಕೇರಳ ಅರಣ್ಯ ಇಲಾಖೆಯಿಂದ ದೊರೆಕಿದ 100ಕ್ಕೂ ಅಧಿಕ ಕಾಡುತ್ಪತ್ತಿ ಗಿಡಗಳನ್ನು ನೆಡಲಾಯಿತು. ಅದಲ್ಲದೇ, ಧ್ಯಾನ ಮಂದಿರ ಪರಿಸರದ ಶುಚೀಕರಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಪ್ರಾಧ್ಯಾಪಕರಾದ ಶ್ರೀ ಗಣರಾಜ್ ಕರುವಜೆ ಅವರ ಸಂಯೋಜನೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಹಾಗೂ ಪರಿಸರವಾಸಿಗಳು ಭಾಗವಹಿಸಿ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top