ಕರಿ ನಾಯಿಮರಿಯ ಬೆಂಬಿದ್ದ ಮಕ್ಕಳು
ಮಕ್ಕಳಿಗೆ ಸಿಗದ ನಾಯಿಮರಿ
ನಾಯಿಮರಿಯ ಬೆಂಬಿದ್ದು ಹಿಡಿವ ಕೇಕೆ
ಮಕ್ಕಳನ್ನು ಓಡಾಡಿಸುತ್ತಾ ನಾಯಿಮರಿ
ಮಹದಾನಂದ!
ತಾಯಿಯಿಲ್ಲದ ಮರಿಯಲ್ಲವಾ
ತಾಯಿಯಿಲ್ಲದ ಮಕ್ಕಳನ್ನು ಆಡಿಸುತ್ತಿದೆ
ಕವಿಯೊಳಗಿನ ಕವಿತೆಯೂ ಹಾಗೆಯೇ
ಕವಿತೆಯನ್ನು ಹಿಡಿಯೋಣವೆಂದು ಕವಿ
ಕವಿಗೆ ಸಿಗಕೂಡದೆಂದು ಕವಿತೆ
ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ
ತಾಯಿಯಿಲ್ಲದ ಕವಿತೆ
ಕವಿತೆ ದೊರಕದ ಕವಿ
ಯಾರನ್ನು ಯಾರು ಆಡಿಸುತ್ತಿದ್ದಾರೆ?
***
ತೆಲುಗು ಮೂಲ: ಡಾ.ಸೀತಾರಾಂ
ಕನ್ನಡ ಅನುವಾದ: ಡಾ.ಎಂ.ಎಸ್. ದುರ್ಗಾಪ್ರವೀಣ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ