ಪೆರ್ನಾಜೆ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿಂಜ ನಿವಾಸಿ ಕಾಕುಂಜೆ ಜಯರಾಮ್ ಭಟ್ ರವರ ಪತ್ನಿ ಉಳ್ಳಿಂಜ ಪಾರ್ವತಿ (61) ಜುಲೈ 28ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಹತ್ತು ವರ್ಷಕ್ಕೂ ಮಿಕ್ಕಿ ಕ್ಯಾನ್ಸರ್ ರೋಗವನ್ನು ಗೆದ್ದು ಅಳುಕದೆ ತೋರಿಸಿಕೊಟ್ಟ ಮಹಿಳೆ. ಅಲ್ಲದೆ ವೇಣೂರು ಮಹಿಳಾ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು. ಮದುವೆ ಮಕ್ಕಳ ವಧು ಸಿಂಗಾರದಲ್ಲಿ ಪರಿಣತರಾಗಿದ್ದರು. ಅಡಿಕೆ ಸಿಂಗಾರದ ಮಾಲೆ, ಕುಸುರಿ ಮಣಿಗಳ ಮಾಲೆ,
ತೋರಣ, ವೈರ್ ಬ್ಯಾಗ್ ಶೃಂಗಾರ, ಆಭರಣಗಳನ್ನು ತಯಾರಿಸುತ್ತಿದ್ದರು.
ಅವರು ತಾಯಿ, ಮೂವರು ಸಹೋದರರು, ಇಬ್ಬರು ಸಹೋದರಿಯರು, ಪತಿ, ಪುತ್ರ ಸೇರಿದಂತೆ ಹಲವಾರು ಬಂಧು ವರ್ಗವನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ