ಪ್ರಾದೇಶಿಕ ಕಂಪಿನೊಂದಿಗೆ ಸಾಮಾಜಿಕ ಸಂದೇಶ ಸಾರುವ ಸು ಫ್ರಂ ಸೋ ಸಿನಿಮಾ: ಮೈಮ್ ರಾಮದಾಸ್

Upayuktha
0

ಸುರತ್ಕಲ್: ಸದಭಿರುಚಿಯ ಕನ್ನಡ ಚಲನಚಿತ್ರಗಳಿಗೆ ಸಾಮಾಜಿಕ ಸೇವಾ ಸಂಸ್ಥೆಗಳು ಪ್ರೋತ್ಸಾಹಿಸಿ ಬೆಂಬಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸು ಫ್ರಮ್ ಸೋ ಕನ್ನಡ ಚಲನಚಿತ್ರವು ತುಳುನಾಡಿನ ಪ್ರಾದೇಶಿಕ ಕಂಪಿನೊಂದಿಗೆ ಸಾಮಾಜಿಕ ಸಂದೇಶವನ್ನು ಸಾರುವ ಯುವ ಮನುಸುಗಳ ಸಾಂಘಿಕ ಪ್ರಯತ್ನದ ಚಿತ್ರವಾಗಿದ್ದು ಪ್ರೇಕ್ಷಕರ ಪ್ರೀತಿಯನ್ನು ಗೆದ್ಧಿದೆ ಎಂದು ನಟ ಮೈಮ್ ರಾಮದಾಸ್ ನುಡಿದರು.


ಅವರು ಸುರತ್ಕಲ್ ರೋಟರಿ ಕ್ಲಬ್ ಕೌಟುಂಬಿಕ ಸ್ನೇಹ ಕಾರ್ಯಕ್ರಮದಡಿ ಚಲನಚಿತ್ರ ವೀಕ್ಷಣೆ ಮತ್ತು ನಟರ ಜೊತೆ ಸಂವಾದದಲ್ಲಿ ಮಾತನಾಡಿದರು. ಹಾಸ್ಯ ನಟ ದೀಪಕ್ ರೈ ಮಾತನಾಡಿ, ಸಹೃದಯ ವೀಕ್ಷಕರ ಅಭಿಮಾನ ಮತ್ತು ಬೆಂಬಲವೇ ಕಲಾವಿದರಿಗೆ ಶಕ್ತಿ ಎಂದರು. ನಟ ಯತೀಶ್ ಬೈಕಂಪಾಡಿ  ಚಲನಚಿತ್ರವು ತನ್ನ ಹೊಸತನದೊಂದಿಗೆ ಕನ್ನಡ ನಾಡಿನ ಜನರ ಮನವನ್ನು ಗೆದ್ದಿದೆ. ಹೊರ ರಾಜ್ಯ ಹಾಗೂ ವಿದೇಶಗಳಲ್ಲೂ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದರು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮ ಚಂದ್ರ ಬಿ. ಕುಂದರ್, ಕಾರ್ಯದರ್ಶಿ ರಾಮ್ ಮೋಹನ್ ವೈ., ಕೋಶಾಧಿಕಾರಿ ಮೋಹನ್ ರಾವ್, ಝೋನಲ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ, ನಿರ್ದೇಶಕರಾದ ಯಶೋಮತಿ, ಚಂದ್ರಕಾಂತ್, ರಾಜ್ ಮೋಹನ ರಾವ್, ಶ್ರೀಶ ಭಟ್, ರಮೇಶ್ ರಾವ್, ಜಗದೀಶ್, ಎಂ.ಬಿ. ಶೆಟ್ಟಿ, ರಾಘವೇಂದ್ರ ಪಿ, ಶ್ರೀಧರ್, ನಿತೀಶ್ ಕುಮಾರ್, ಸತೀಶ್ ರಾವ್ ಇಡ್ಯಾ, ಯೋಗೀಶ್ ಕುಳಾಯಿ, ಚಲನ ಚಿತ್ರ ತಂಡದ ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top