
ಮೂಡುಬಿದಿರೆ: ಮೇ 2025 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 13.22 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜು ಗ್ರೂಪ್ -01 ಮತ್ತು ಗ್ರೂಪ್-02 ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 50 ಫಲಿತಾಂಶ ದಾಖಲಿಸಿದ್ದಾರೆ.
ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ರ‍್ಯನ್ ಕಾರ್ಯಪ್ಪ (401), ಸ್ಮಿತಾ(397), ಆಕಾಶ್ ಚಂದ್ರಕಾಂತ್ ಹೆಗ್ಡೆ (365) ಸುಮಂತ್ (345), ದರ್ಶನ್ ಪೂಜಾರಿ (340), ಶಿವಪ್ರಸಾದ್ (316), ಕನ್ಯಾ ಪ್ರಭು (313), ಶಾನ್ ಪಿಂಟೋ(311), ಮೋನಿಷಾ ಕುಂದರ್(310) ಅನ್ವೇಶ್ ಕುಂದರ್ (308), ಅಶ್ವಥ್ (305), ತರುಣ್ ಕೆ (306), ಶ್ರೇಯಸ್ ಶೆಟ್ಟಿಗಾರ್ (306), ಪುನೀತ್ ಎಸ್. (305), ವೈಷ್ಣವಿ (300), ದೀಕ್ಷಾ(300) ಮತ್ತು ಪ್ರತೀಕ್ಷಾ (300) ಆಕಾಶ್ ಜೆ ಭಟ್ (300) ಆಶೆಲ್‌ಡಿ’ಸೋಜಾ (300) ಮತ್ತು ಜ್ಯೋತಿ (300) ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ