* ಬೆಳ್ತಂಗಡಿ ರೋಟರಿ ಕ್ಲಬ್ 2024-25 ನೇ ಸಾಲಿಗೆ 10 ಪ್ರಶಸ್ತಿ.
* ಬೆಳ್ತಂಗಡಿಯ ಸೇವಾ ಕಾರ್ಯಕ್ಕೆ ಜಿಲ್ಲಾ ಗವರ್ನರ್ ಶ್ಲಾಘನೆ.
* 2 ಕೋಟಿಗೂ ಹೆಚ್ಚಿನ ಅನುದಾನ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗ.
ಬೆಳ್ತಂಗಡಿ : 'ಅವಲೋಕನ' ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಪಿಲಿಕುಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181 ಒಳಪಟ್ಟ ರೋಟರಿ ಕ್ಲಬ್ ಗಳ ಪೈಕಿ 2024 -25 ನೇ ಸಾಲಿನ ವಾರ್ಷಿಕ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿವಿಧ ವಿಭಾಗಗಳಲ್ಲಿ 10 ಪ್ರಶಸ್ತಿಗಳು ಲಭಿಸಿವೆ. RI ಜಿಲ್ಲೆ 3181 ರೋಟರಿ ಕ್ಲಬ್ ಗಳ ಪೈಕಿ ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿಗಳು ಈ ಬಾರಿ ದೊರೆತಿದೆ.
ಪ್ರಶಸ್ತಿಗಳ ವಿವರ :
1. 3181 ಜಿಲ್ಲೆಯ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿ (ಅತ್ಯುನ್ನತ ಗೌರವ)
2. ಕಾರ್ಯೋನ್ಮುಕ ಶ್ರೇಷ್ಠತೆ ಪ್ರಶಸ್ತಿ -ಪ್ರಥಮ ಸ್ಥಾನ
3. ಎಕ್ಸೆಲೆನ್ಸ್ ಇನ್ ಪಬ್ಲಿಕ್ ಇಮೇಜ್ - ಪ್ರಥಮ ಸ್ಥಾನ
4. ಆಕ್ಷನ್ ಚಾಂಪಿಯನ್ ಮೆಚ್ಚುಗೆ ಪ್ರಶಸ್ತಿ - ರೋ. ಅನಂತ್ ಭಟ್ ಮತ್ತು ರೋ. ವಿದ್ಯಾಕುಮಾರ್ ಕಾಂಚೋಡುರವರಿಗೆ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಶಸ್ತಿ.
5. ಸಿಗ್ನಿಫಿಕೆಂಟ್ ಸರ್ವೀಸ್ ಅವಾರ್ಡ್ - ರೋಟರಿ ಕ್ಲಬ್ ಬೆಳ್ತಂಗಡಿ
6. ಸೇವಾ ವಿಭಾಗದ ವೈಯಕ್ತಿಕ ಪ್ರಶಸ್ತಿ : ರೋ. ಶ್ರೀಧರ್ ಕೆ ವಿ
7. TRF ಚಾಂಪಿಯನ್ ಅವಾರ್ಡ್
8. ಇಂಟರಾಕ್ಟ್ ಕ್ಲಬ್ ಡೈಮಂಡ್ ಪ್ಲಸ್ ಅವಾರ್ಡ್ಸ್
ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ (CBSE) ಉಜಿರೆ.
9. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ, ಉಜಿರೆ
10. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಅನುದಾನಿತ ಮಾಧ್ಯಮಿಕ ಶಾಲೆ ಉಜಿರೆ
ಬೆಳ್ತಂಗಡಿ ರೋಟರಿ ಕ್ಲಬ್ ನ 2024-25 ನೇ ಸಾಲಿನ ಶೈಕ್ಷಣಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಸೇವಾ ಕಾರ್ಯಗಳು:
ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು, 40 ಲಕ್ಷ ಮೊತ್ತದ ಸರಕಾರಿ ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯ, 25 ಲಕ್ಷಕ್ಕೂ ಅಧಿಕ ಮೊತ್ತದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, 14 ಲಕ್ಷ ಮೊತ್ತದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, 5 ಲಕ್ಷ ಮೊತ್ತದ ಶಾಲಾ ಕಾಲೇಜುಗಳಿಗೆ ಮೂಲಭೂತ ಪೀಟೋಪಕರಣಗಳ ಕೊಡುಗೆ, ವಿವಿಧ ತರಭೇತಿ ಮತ್ತು ಮಾಹಿತಿ ಕಾರ್ಯಕ್ರಮ.
ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಯುತ್ ಕಾರ್ನಿವಲ್ - ವಿವಿಧ ಜಿಲ್ಲಾ ವಿದ್ಯಾರ್ಥಿಗಳ ಜಿಲ್ಲಾ ಸಮ್ಮೇಳನ, 7 ಉಚಿತ ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು, 9 ಬೃಹತ್ ರಕ್ತದಾನ ಶಿಬಿರಗಳ ಮೂಲಕ 1300 ಯುನಿಟ್ ರಕ್ತ ಸಂಗ್ರಹ, 9 ಲಕ್ಷಕ್ಕೂ ಅಧಿಕ ಮೊತ್ತದ ತಾಲೂಕು ಪಶು ಆಸ್ಪತ್ರೆಯ ಕಟ್ಟಡ ನವೀಕರಣ, ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ, ಅಶಕ್ತರಿಗೆ ವೀಲ್ ಚೇರ್, ವಾಕರ್ ಮತ್ತು ವಾಟರ್ ಬೆಡ್ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಸೇರಿದಂತೆ 200ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳು, 2 ಕೋಟಿಗೂ ಹೆಚ್ಚಿನ ಅನುದಾನ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗ ರೋಟರಿ ಕ್ಲಬ್ ಬೆಳ್ತಂಗಡಿಯದ್ದಾಗಿದೆ.
ಈ ಎಲ್ಲಾ ಕಾರ್ಯಗಳನ್ನು ಗುರುತಿಸಿ ರೋಟರಿ RI ಜಿಲ್ಲೆ 3181 ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ 3181 ಜಿಲ್ಲಾ ಗವರ್ನರ್ ರೋ.ವಿಕ್ರಮ ದತ್ತ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ. ಮೊಹಮ್ಮದ್ ವಳವೂರು, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಜಯಕುಮಾರ್ ಶೆಟ್ಟಿ, ರೋ.ಅಳಗಪ್ಪನ್ ರೋ. ದೇವ್ ಆನಂದ್, ಎಲ್ಐ ಜಿಲ್ಲೆ 317 ಜಿಲ್ಲಾ ಗವರ್ನರ್ ಲಯನ್ ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೋ. ಧನಂಜಯ ರಾವ್, ರೋ. ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು,ರೋ. ಅರುಣ್ , ರೋ. ಶ್ರೀಧರ್ ಕೆ.ವಿ, ರೋ. ಪ್ರವೀಣ್ ಗೋರೆ ಸೇರಿದಂತೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ಆಶೀರ್ವಾದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ವರ್ಷ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು. ತಾಲೂಕಿನಲ್ಲಿನ ಬೇರೆ ಬೇರೆ ಅಗತ್ಯತೆಗಳನ್ನು ಅರಿತು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಯೋಜನೆಗೆ ತರಲು ಸಹಕಾರ ನೀಡಿದ ಬೆಳ್ತಂಗಡಿಯ ಅನೇಕ ಸಂಘ - ಸಂಸ್ಥೆಗಳು, ಬೆಂಗಳೂರಿನ ಸಿಎಸ್ಆರ್ ಪಾರ್ಟ್ನರ್ ಕಂಪೆನಿಗಳು ಮತ್ತು ಇಂದಿರಾನಗರ ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಂದಿರುವ ಈ ಎಲ್ಲಾ ಪ್ರಶಸ್ತಿಗಳು ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರಿಶ್ರಮದ ಫಲವಾಗಿದೆ.
- ಪೂರನ್ ವರ್ಮ
ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ