ತುಳುನಾಡಿನಲ್ಲಿ ವರ್ಷದ 12 ತಿಂಗಳನ್ನು ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋಣ, ನಿರ್ನಾಲ, ಬೊಂತೆಲ್, ಜಾರ್ತೆ, ಪೊನ್ನಿ, ಮಾಯಿ, ಸುಗ್ಗಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ತುಳುವರ ತಿಂಗಳುಗಳಲ್ಲಿ ನಾಲ್ಕನೇ ತಿಂಗಳು ಆಟಿಯಾಗಿದೆ. ಕರ್ಕಟಕ ಸಂಕ್ರಮಣವನ್ನು ಆಟಿ ಎಂದು ಕರೆಯಲಾಗುತ್ತದೆ. ಆಟಿಯನ್ನು ಕಠಿಣ ತಿಂಗಳೆಂದು ಕರೆಯುತ್ತಾರೆ. ಹಾಗಾಗಿ ಈ ಸಂದರ್ಭದಲ್ಲಿ ಯಾವುದೇ ಶುಭಕಾರ್ಯಗಳು ಅಥವಾ ಇನ್ನಿತರ ಯಾವುದೇ ಮದುವೆ ಸಮಾರಂಭಗಳು ನಡೆಯುವುದಿಲ್ಲ. ಅಪರಕ್ರಿಯೆಗಳು ಮಾತ್ರ ನಡೆಸುತ್ತಾರೆ. ಶುಭಕಾರ್ಯಗಳನ್ನು ಈ ಸಂದರ್ಭದಲ್ಲಿ ನೆಡಸುವುದು ಸೂಕ್ತವಲ್ಲ ಎಂಬುದು ಹಿರಿಯರ ನಂಬಿಕೆ.
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಟಿ ಕಷಾಯ (ಪಾಲೆ = ಹಾಲೆ ಮರದ ಕೆತ್ತೆಯಿಂದ ತಯಾರಿಸುವ ಕಷಾಯ) ಕುಡಿಯುವುದು ವಾಡಿಕೆ. ತುಳುನಾಡಿನ ಪ್ರಭಾವಕ್ಕೆ ಒಳಗಾದ ಮಲಯಾಳದ ಪ್ರದೇಶಗಳಲ್ಲಿ ಇದನ್ನೇ ಕರ್ಕಟಕ ಕಂಞ್ಞಿ (ಕಂಞಿ ಅಂದರೆ ಗಂಜಿ ಎಂದು ಅರ್ಥ) ಎಂದು ಕರೆಯುತ್ತಾರೆ. ಇದೊಂದು ಉತ್ತಮ ಔಷಧಿ ಎಂದು ಪರಿಗಣಿಸಲಾಗಿದ್ದು, ಇದರಿಂದ ನಿರೋಧಕ ಶಕ್ತಿಯು ವೃದ್ಧಿಸುತ್ತದೆ.
ಆಟಿ ಕಳಂಜ:
ಆಟಿ ತಿಂಗಳಲ್ಲಿ ಬರುವ ದುರಿತಗಳನ್ನು ನಿವಾರಣೆ ಮಾಡಲು ಆಟಿಕಳೆಂಜ ಬರುತ್ತಾನೆ ಎಂಬ ನಂಬಿಕೆ ತುಳುವರಲ್ಲಿ ನೆಲೆನಿಂತಿದೆ. ಆಟಿ ಸಮಯದಲ್ಲಿ ಹಲವಾರು ರೋಗ ರುಜಿನಗಳು ಬಂದು ಮಾನವನು ಬಳಲುತ್ತಾನೆ. ಇದನ್ನು ದೂರ ಮಾಡಲು ಆಟಿ ಕಳೆಂಜ ಬರುತ್ತಾನೆ ಎಂಬುದು ಜನರ ಅಂಬೋಣ.
ಆಟಿ ಕಳಂಜ ತುಳುನಾಡಿನ ಒಂದು ಜನಪದ ಕಲೆ ಮತ್ತು ಆಚರಣೆಯಾಗಿದೆ. ಆಟಿ ತಿಂಗಳಲ್ಲಿ (ತುಳು ಕ್ಯಾಲೆಂಡರ್‌ನ ಒಂದು ತಿಂಗಳು, ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್) ಮನೆಮನೆಗೆ ಬರುವ ಕಳೆಂಜನು ಊರಿನ ಮಾರಿಯನ್ನು (ರೋಗರುಜಿನಗಳನ್ನು) ದೂರ ಮಾಡುತ್ತಾನೆ ಎಂಬ ನಂಬಿಕೆಯಿದೆ. ಕಳೆಂಜನು ವಿಶೇಷ ವೇಷಭೂಷಣಗಳನ್ನು ಧರಿಸಿ, ಡೋಲಿನ ಶಬ್ದಕ್ಕೆ ತಕ್ಕಂತೆ ಕುಣಿದು, ಪಾಡ್ದನಗಳನ್ನು ಹೇಳುತ್ತಾ ಮನೆಗಳಿಗೆ ಬರುತ್ತಾನೆ. ಭಕ್ತಿಯಿಂದ ಮನೆಗಳಲ್ಲಿ ಅವನಿಗೆ ಅಕ್ಕಿ, ತೆಂಗಿನಕಾಯಿ, ಎಣ್ಣೆ ಮುಂತಾದವುಗಳನ್ನು ಕೊಟ್ಟು ಸತ್ಕರಿಸುತ್ತಾರೆ.
ಆಚರಣೆಯ ಉದ್ದೇಶ: ಆಟಿ ತಿಂಗಳಲ್ಲಿ ಬರುವ ರೋಗರುಜಿನಗಳನ್ನು ದೂರ ಮಾಡಲು ಮತ್ತು ಊರಿಗೆ ಸಮೃದ್ಧಿಯನ್ನು ತರಲು ಆಟಿ ಕಳೆಂಜನನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಲಿಕೆ ಜನಾಂಗದ ವರು ಆಟಿ ಕಳೆಂಜನ ವೇಷವನ್ನು ಧರಿಸುತ್ತಾರೆ. ಕಳೆಂಜನು ತೆಂಗಿನ ಗರಿಗಳಿಂದ ಮಾಡಿದ ಸೊಂಟಪಟ್ಟಿ ಯನ್ನು ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಮುಖಕ್ಕೆ ಬಣ್ಣ ಹಚ್ಚಿಕೊಂಡು, ಅಡಿಕೆ ಹಾಳೆಯಿಂದ ಮಾಡಿದ ಟೊಪ್ಪಿಗೆಯನ್ನು ಧರಿಸುತ್ತಾನೆ.
ಪಾಡ್ದನ: ಕಳೆಂಜನೊಂದಿಗೆ ಬರುವವರು ಡೋಲು ಬಾರಿಸುತ್ತಾ ಪಾಡ್ದನಗಳನ್ನು ಹೇಳುತ್ತಾರೆ. ಪಾಡ್ದನಗಳು ಕಳೆಂಜನ ಕಥೆಯನ್ನು ಹೇಳುತ್ತವೆ. ಮನೆಮನೆಗೆ ಹೋದಾಗ ಕಳೆಂಜನಿಗೆ ಅಕ್ಕಿ, ತೆಂಗಿನಕಾಯಿ, ಎಣ್ಣೆ ಮತ್ತು ಹಣವನ್ನು ದಾನವಾಗಿ ನೀಡುತ್ತಾರೆ.
ಆಟಿ ಕಳೆಂಜ ತುಳುನಾಡಿನ ಒಂದು ಜಾನಪದ ನೃತ್ಯ ಮತ್ತು ಆಚರಣೆಯಾಗಿದೆ. ಇದು ಆಟಿ ತಿಂಗಳಿನಲ್ಲಿ (ತುಳು ಕ್ಯಾಲೆಂಡರ್‌ನ ನಾಲ್ಕನೇ ತಿಂಗಳು) ಬರುತ್ತದೆ, ಇದನ್ನು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ, ಕಳೆಂಜ ವೇಷವನ್ನು ಧರಿಸಿದ ವ್ಯಕ್ತಿಯು ಮನೆಮನೆಗೆ ಭೇಟಿ ನೀಡಿ, ಪಾಡ್ದನಗಳನ್ನು (ಪದಗಳನ್ನು) ಹಾಡುತ್ತಾ, ದುಷ್ಟ ಶಕ್ತಿಗಳನ್ನು ಓಡಿಸಿ, ಊರಿಗೆ ಸಮೃದ್ಧಿಯನ್ನು ತರುತ್ತಾನೆ ಎಂದು ನಂಬಲಾಗಿದೆ.
ಆಟಿ ತಿಂಗಳ ಆಚರಣೆ: ತುಳುನಾಡಿನಲ್ಲಿ ಆಟಿ ತಿಂಗಳು ಮಳೆಯ ಹೆಚ್ಚಿನ ಸಮಯ ಮತ್ತು ಕೆಲವು ನಂಬಿಕೆಗಳ ಪ್ರಕಾರ ರೋಗರುಜಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ತಿಂಗಳು. ಈ ತಿಂಗಳಿನಲ್ಲಿ, ಕಳೆಂಜ ವೇಷಧಾರಿ ಮನೆಯಂಗಳಕ್ಕೆ ಬಂದರೆ, ಊರಿಗೆ ಬಂದಿರುವ ಮಾರಿ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಕಳೆಂಜ ವೇಷ: ಕಳೆಂಜ ವೇಷವನ್ನು ಸಾಮಾನ್ಯವಾಗಿ ನಲಿಕೆ ಅಥವಾ ಪಾಣಾರ ಸಮುದಾಯದವರು ಧರಿಸುತ್ತಾರೆ. ವೇಷವು ಸೊಂಟಕ್ಕೆ ತೆಂಗಿನ ಗರಿ, ಕಾಲಿಗೆ ಗಗ್ಗರ, ಮುಖಕ್ಕೆ ಬಣ್ಣ, ತೆಂಗಿನ ನಾರಿನಿಂದ ಮಾಡಿದ ಮೀಸೆ ಮತ್ತು ಗಡ್ಡಗಳನ್ನು ಒಳಗೊಂಡಿರುತ್ತದೆ.
ಪಾಡ್ದನಗಳು: ಕಳೆಂಜನ ಜೊತೆಯಲ್ಲಿ ಪಾಡ್ದನ ಹಾಡುವವರು ಮತ್ತು ತೆಂಬರೆ (ಚರ್ಮದಿಂದ ಮಾಡಿದ ವಾದ್ಯ) ನುಡಿಸುವವರು ಇರುತ್ತಾರೆ. ಇವರು ಊರಿನಲ್ಲಿನ ಜನರು ಮತ್ತು ಜಾನುವಾರುಗಳಿಗೆ ಬರುವ ರೋಗರುಜಿನಗಳನ್ನು ದೂರ ಮಾಡುವಂತೆ ಆಟಿ ಕಳೆಂಜನಲ್ಲಿ ಪ್ರಾರ್ಥಿಸುತ್ತಾರೆ.
ಆಟಿಯ ಅಗೆಲ್ ಕುಲ್ಲುನೆ: ಆಟಿ ತಿಂಗಳಿನಲ್ಲಿ ಸತ್ತವರಿಗೆ ಬಡಿಸುವ ಆಚರಣೆಯನ್ನು ಅಗೆಲ್ ಕುಲ್ಲುನೆ ಎಂದು ಕರೆಯುತ್ತಾರೆ. ಆಟಿ ತಿಂಗಳಿನಲ್ಲಿ ಮದುವೆಯಾದ ದಂಪತಿಗಳು ಹಿರಿಯರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗುವ ಆಚರಣೆ ಇದೆ.
ಆಟಿ ಕಳಂಜ ಹಿನ್ನೆಲೆ:
ಆಟಿ ತಿಂಗಳಿನಲ್ಲಿ ಬರುವ ಆಟಿ ಕಳಂಜ ದೈವದ ಒಂದು ರೂಪ. ಆಟಿ ತಿಂಗಳಿನಲ್ಲಿ ನಮಗೆ ಊಟಕ್ಕೆ ಗತಿ ಇಲ್ಲ. ಹಾಗಿದ್ದರೆ ದೈವ ದೇವರುಗಳಿಗೆ ಎಲ್ಲಿಂದ ಕೊಡುವುದು? ಅದಕ್ಕಾಗಿ ಮಕ್ಕಳು ಯಾವಾಗಲೂ ಕೇಳುತ್ತಾರೆ ದೈವಕ್ಕೆ ದೂಪ ಇಡುವುದಿಲ್ಲವೇ, ಎಂಬೆಲ್ಲಾ ಪ್ರಶ್ನೆಗಳನ್ನು ಕೇಳುವುದುಂಟು. ಆಗ ಹಿರಿಯರು ಒಂದೇ ಮಾತಿನಲ್ಲಿ ನಿಲ್ಲಿಸುತ್ತಿದ್ದರು- ಅದೆಲ್ಲವೂ ದೈವಕ್ಕೆ ಸಮರ್ಪಿತ ಎಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. ಆಟಿ ತಿಂಗಳಿನಲ್ಲಿ ನಮಗೆ ಹೇಗೆ ಹಸಿವು ಎನ್ನುವುದು ಕಾಡುತ್ತಿತ್ತೋ ಹಾಗೇ ಅವರಿಗೂ ಕಾಡುತ್ತದೆ. ವರ್ಷದ 11 ತಿಂಗಳು ಭೂತ ಕೋಲ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಆಟಿ ತಿಂಗಳಲ್ಲಿ ಕೆಲಸವಿರುವುದಿಲ್ಲ. ಆದ್ದರಿಂದ ಹೊಟ್ಟೆ ತುಂಬಿಸುವುದಕ್ಕಾಗಿ ವೇಷ ಹಾಕಿ ಊರಿನ ಎಲ್ಲಾ ಮನೆಗಳನ್ನು ಸಂದರ್ಶಿಸುತ್ತಾರೆ ಮತ್ತು ಅಲ್ಲಿ ದೊರಕಿದ ಭತ್ತ, ಅಕ್ಕಿ, ಹಲಸಿನಕಾಯಿ ಬೀಜ ತೆಂಗಿನ ಕಾಯಿ ಇತ್ಯಾದಿಗಳಿಂದ ಮಳೆಗಾಲವನ್ನು ಸುಲಭದಲ್ಲಿ ಕಳೆಯುತ್ತಾರೆ.
-ಕಾರ್ತಿಕ್ ಕುಮಾರ್ ಕೆ.
ಶ್ರೀ ದುರ್ಗಾನಿಲಯ ಕಡೆಕಲ್ಲು ಏತಡ್ಕ
ಶ್ರೀ ದುರ್ಗಾ ಡಿಜಿಟಲ್ ಸ್ಟುಡಿಯೋ & ವೀಡಿಯೊ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ