27ರಂದು ಕುಡ್ಲ ತುಳುಕೂಟದಿಂದ "ಆಟಿ ಕಾರ್ಯಕ್ರಮ"

Upayuktha
0


ಮಂಗಳೂರು: ಜುಲೈ 27ರಂದು ಭಾನುವಾರ ಬೆಳಿಗ್ಗೆ 10:30 ಗಂಟೆಗೆ ಬಲ್ಲಾಳ್ ಭಾಗ್ ನಲ್ಲಿರುವ "ಪತ್ತು ಮುಡಿ" ಸಭಾಭವನದಲ್ಲಿ ತುಳುಕೂಟದ ಆಟಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಕಾಮತರು ಉದ್ಘಾಟಿಸಿ "ಬಂಗಾರ ಪಿಂಗಾರ" ಎಂಬ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಿದ್ದಾರೆ. ಗೋಳಿದಡಿಗುತ್ತು ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟರು ಅಧ್ಯಕ್ಷರಾಗಿರುತ್ತಾರೆ.


ಡಾ.ಹರಿಕೃಷ್ಣ ಪುನರೂರು, ಪದ್ಮರಾಜ್ ಆರ್., 'ಸುಮಲತಾ ಎನ್. ಸುವರ್ಣ, ಸೂರ್ಯನಾರಾಯಣ ರಾವ್ ಪತ್ತ್ ಮುಡಿ, ಜಾನಪದ ವಿದ್ಯಾಂಸ ಮುದ್ದು ಮೂಡುಬೆಳ್ಳೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅದೇ ರೀತಿ ಈರ್ವರು ಪ್ರತಿಭೆಗಳನ್ನು ಗೌರವಿಸಲಾಗುತ್ತದೆ ಎಂದು ಕುಡ್ಲ ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top