ಮಂಗಳೂರು: "ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಕಲೆಗಳಲ್ಲಿ ಆತ ತೊಡಗಿಸಿಕೊಂಡರೆ ಆತನಿಂದಾಗಿ ಕಲೆಯೂ ಬೆಳಕಿಗೆ ಬರುತ್ತದೆ. ಕಲಾವಿದನೂ ಆಗಿ ಮೂಡಿಬರುತ್ತಾನೆ. ಶಾಲಾ ಅವಧಿಯಲ್ಲಿ ಕಲಿಯಲೂ ಅವಕಾಶವಿರುತ್ತದೆ. ಯಕ್ಷಗಾನವೂ ಅಂತೆಯೇ ಮೈ ಮನಸ್ಸುಗಳನ್ನು ಅರಳಿಸುವ ಕಲೆ. ಅದರಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳೂ ಶಿಕ್ಷಣದಲ್ಲಿ ಕೂಡಾ ಉತ್ತಮ ಪ್ರಗತಿಯನ್ನು ಕಾಣುತ್ತಾನೆ. ಹೀಗೆ ಕಲೆಯನ್ನು ಬೆಳೆಸುತ್ತಾ ಪ್ರೋತ್ಸಾಹಿಸೋಣ" ಎಂದು ಡಾ. ಪಿ. ಅನಂತಕೃಷ್ಣ ಭಟ್ ಹೇಳಿದರು.
ಕುತ್ತಾರಿನ ಮಂಗಳಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರಗಿದ ಗೌತಮ್ ಭಂಡಾರಿ ಮತ್ತು ಬಳಗದ ಜಾಂಬವತಿ ಪ್ರಸಂಗದ ಸಭಾ ಕಾರ್ಯಕ್ರಮದಲ್ಲಿ ಹೇಳಿದರು. ಟ್ರಸ್ಟಿಗಳಾದ ಕೆರೆಮನೆ ನರಸಿಂಹ ಹೆಗ್ಗಡೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕುಮಾರಿಯರಾದ ಕೀರ್ತನಾ ಮತ್ತು ಶ್ರೇಯಾ ಪ್ರಾರ್ಥನೆಗೈದರು. ಶಿಕ್ಷಕಿ ಸುಶ್ಮಿತಾ ನಿರ್ವಹಿಸಿದರು. ಸಂಯೋಜಕ ಗೌತಂ ಭಂಡಾರಿ ನಿರ್ವಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವರ್ಕಾಡಿ ರವಿ ಅಲೆವೂರಾಯ, ಗೌರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ