ತೆಂಕನಿಡಿಯೂರು ಕಾಲೇಜಿನಲ್ಲಿ ಕಬ್ಬದುಳುಮೆ ಕಾರ್ಯಕ್ರಮದ ಸಮಾರೋಪ

Upayuktha
0



ಉಡುಪಿ: ಶಿಕ್ಷಣದ ಮುಖೇನ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ವೃದ್ದಿಸಿಕೊಳ್ಳಬೇಕು; ಕೀಳರಿಮೆಯಿಂದ ಮುಕ್ತರಾಗಬೇಕು. ವ್ಯಕ್ತಿ, ವಸ್ತು, ಪುಸ್ತಕ ಯಾವುದನ್ನೇ ಆಗಲಿ ದೂರ ಇಟ್ಟಷ್ಟು ಅದರೊಂದಿಗಿನ ನಮ್ಮ ಅಂತರ ಹೆಚ್ಚಾಗುತ್ತದೆ. ಯಾವುದೇ ವಿಷಯಗಳ ಮೂಲಭೂತ ಅಂಶಗಳ ಪರಿಜ್ಞಾನ ಅಗತ್ಯ. ಹಳೆಗನ್ನಡ ಪಠ್ಯಗಳೂ ಹಾಗೆ. ಅದನ್ನು ದೂರವಿಟ್ಟಷ್ಟು  ಕಠಿಣವೆನಿಸುತ್ತದೆ. ಹಳೆಗನ್ನಡ ಕಾವ್ಯಗಳು ಕಬ್ಬಿಣದ ಕಡಲೆಗಳಲ್ಲ; ನಮ್ಮ ಜೀವನ ಮೌಲ್ಯಗಳನ್ನು ಕಟ್ಟಿಕೊಡುವಂಥವುಗಳು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಹೇಳಿದರು. 


 ಅವರು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ  ಕಬ್ಬದುಳುಮೆ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವಕರ ಅವರು ಅಧ್ಯಕ್ಷತೆ ವಹಿಸಿದ್ದರು. 


ಐಕ್ಯೂಎಸಿ ಸಂಚಾಲಕಿ ಡಾ.ಮೇವಿ ಮಿರಾಂದ , ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಸಂಧ್ಯಾರಾಣಿ, ಶರಿತಾ ಕುಮಾರಿ, ಅರ್ಚನಾ, ಭಾರತಿ, ಶಾಲಿನಿ, ಜ್ಯೋತಿ, ಶಂಕರ್ರಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮೇಘನ್ ಕುಮಾರ್, ಶಿವಾನಿ ಶೆಟ್ಟಿ , ಕೃಷ್ಣ ಜಿ.ಜಿ ಹಳೆಗನ್ನಡ ಕಾವ್ಯಗಳನ್ನು ವಾಚಿಸಿದರು. 


ವಿಠಲ,ಪ್ರತಿಭಾ , ನೇತ್ರಾವತಿ ಕಬ್ಬದುಳುಮೆ ವಿಶೇಷ ತರಗತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅನೂಷಾ ಮತ್ತು ಬಳಗ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು, ನೈನಾ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top