ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಭಕ್ತಿ ದೀಕ್ಷಾ ಪರ್ವ

Upayuktha
0

ನೂರಾರು ಭಕ್ತರಿಗೆ ಪೇಜಾವರ ಶ್ರೀಗಳಿಂದ ಕೃಷ್ಣ ಮಂತ್ರೋದೇಶ 





ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 500 ಕ್ಕೂ ಅಧಿಕ ಹಿಂದು ಶ್ರದ್ಧಾಳುಗಳಿಗೆ ಸಾಮೂಹಿಕ ಕೃಷ್ಣ ಮಂತ್ರೋಪದೇಶ ನೀಡಿ ಅನುಗ್ರಹಿಸಿದರು.


ಜಾತಿ ಪಂಥ, ವಯಸ್ಸು ಲಿಂಗ ಬೇಧವಿದಲ್ಲದೇ 8 ರಿಂದ 80 ವರ್ಷದ ವರೆಗಿನ ಹಿಂದು ಪುರುಷ ಮಹಿಳೆಯರಿಗೆ ಶ್ರೀಗಳು ತಪ್ತಮುದ್ರಾಧಾರಣೆಗೈದು, ಜಪಸರವನ್ನಿತ್ತು ಕೃಷ್ಣಮಂತ್ರೋಪದೇಶ ನೀಡಿ ಪ್ರಸಾದ ಸಹಿತ ಅನುಗ್ರಹಿಸಿದರು. 


ಸಮಸ್ತ ಹಿಂದು ಸಮಾಜದ ಸಂಘಟನೆ ಬಲಪಡಿಸುವುದು. ಎಲ್ಲರೂ ಸದಾಚಾರ ನಿಷ್ಠರಾಗಿ ನೆಮ್ಮದಿಯ ಜೀವನ ನಡೆಸುವ ಅಗಬೇಕು. ನಮ್ಮ ಆಚಾರ ವಿಚಾರಗಳನ್ನು ಜಾತಿ ಪಂಥಗಳ ಬೇಧವೆಲ್ಲದೇ ಸಮಷ್ಟಿಯಾಗಿ ಪಾಲಿಸಿಕೊಂಡು ಬರುವಂತಾಗಬೇಕೆಂಬ ಸದುದ್ದೇಶದಿಂದ ಆಷಾಢ ಮಾಸದ ಪರ್ವಕಾಲದಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಶ್ರೀಗಳವರು ತಿಳಿಸಿದರು.


ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತವಿರುವ ಶ್ರೀಮಠದ ಎಲ್ಲ ಶಾಖೆಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಇದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ ಸತ್ಯನಾರಾಯಣ ಆಚಾರ್ಯ, ಸಂಶೋಧನ ಕೇಂದ್ರದ ನಿರ್ದೇಶಕ ಡಾ ವೀರನಾರಾಯಣ ಪಾಂಡುರಂಗಿ, ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಶಶಾಂಕ ಭಟ್ ಹಾಗೂ ಪ್ರಾಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top