ಬಾಳೆಕುದ್ರು ಶ್ರೀಗಳು ಬ್ರಹ್ಮೈಕ್ಯ: ಡಿ. ವೀರೇಂದ್ರ ಹೆಗ್ಗಡೆ ಸಂತಾಪ

Upayuktha
0



ಧರ್ಮಸ್ಥಳ: ಬಾಳೆಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿಯವರು ಬ್ರಹ್ಮೈಕ್ಯರಾದ ಘಟನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಶ್ರೀಗಳು 2006ರಿಂದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಅವರು ಹಿಂದೊಮ್ಮೆ ಆಗಮಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು ಎಂದು ಹೆಗ್ಗಡೆಯವರು ಸ್ಮರಿಸಿಕೊಂಡಿದ್ದಾರೆ.


ಶ್ರೀ ಮಠವು ಸಾವಿರಾರು ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದ್ದು ಶ್ರೀಗಳವರು ಸನಾತನ ಧರ್ಮದ ಅದ್ವೈತ ಸಂಪ್ರದಾಯದ ಪ್ರವರ್ತಕರಾಗಿದ್ದರು. ಕರ್ನಾಟಕದಲ್ಲಿ ಈ ಮಟ್ಟದ ಹಲವಾರು ಶಾಖೆಗಳು ಇದ್ದು ಅನೇಕ ಸದ್ಧರ್ಮ ಕಾರ್ಯಗಳು ನಡೆದಿವೆ. ಮುಂದೆ ಶ್ರೀಮಠದ ಉತ್ತರಾಧಿಕಾರಿ ಹಿರಿಯ ಶ್ರೀಗಳ ಹಾದಿಯಲ್ಲಿ ಸಾಗಿ ಸಮಾಜಮುಖಿ ಧರ್ಮಕಾರ್ಯಗಳನ್ನು ನಡೆಸುವಂತಾಗಲಿ ಎಂದು ಆಶಿಸುತ್ತಾ ಶ್ರೀಗಳ ಬ್ರಹ್ಮೈಕ್ಯರಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೆಗ್ಗಡೆಯವರು ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top