ಧರ್ಮಸ್ಥಳ ಸಂಘದ ಸಮಾಜ ಸೇವೆ ಸ್ವಾಗತಾರ್ಹ: ಕೆ ಹನುಮಂತಪ್ಪ

Upayuktha
0



ಬಳ್ಳಾರಿ: ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೇವಲ ಹಣಕಾಸು ದೂರವನ್ನು ಮಾಡಿದೆ ವೃದ್ಧರಿಗೆ ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡುವುದು, ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಡಬಹುದು, ಬಡವರ ಶಿಕ್ಷಣಕ್ಕೆ ಆರ್ಥಿಕ  ನೆರವು ನೀಡುತ್ತಿರುವುದು, ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ಒದಗಿಸುತ್ತಿರುವುದು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ನಡೆಸುತ್ತಾ ಸಮಾಜ ಸೇವೆಯನ್ನು ಮಾಡುತ್ತಿದೆ ಇದು ಅತ್ಯಂತ ಸ್ವಾಗತಾರ್ಹ  ಮತ್ತು ಶ್ಲಾಘನೀಯವಾದ ಕೆಲಸ ಎಂದು  ಮಹಾನಗರ ಪಾಲಿಕೆ 22ನೇ ವಾರ್ಡಿನ ಸದಸ್ಯರಾದ ಕೆ ಹನುಮಂತಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.


ಅವರು  ನಗರದ 22ನೇ ವಾರ್ಡ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್  ಬಳ್ಳಾರಿ ಸಿಟಿ ವಲಯದ ಗಾಂಧಿನಗರ  ಕಾರ್ಯಕ್ಷೇತ್ರದ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೃಷ್ಟಿಹೀನ ವಿಕಲಚೇತನರಾದ  ಬಿ ಲಿಂಗಣ್ಣ ಅವರಿಗೆ ಮಾಶಾಸನ ಆದೇಶ ಪ್ರತಿಯನ್ನು ವಿತರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಒಕ್ಕೂಟದ ಅಧ್ಯಕ್ಷರಾದ ವನಿತಾ,  ವಲಯದ ಮೇಲ್ವಿಚಾರಕ ಸಂಜೀವ್,  ಸಂಘದ ಸದಸ್ಯರು ಆ ಪ್ರದೇಶದ ಮುಖಂಡರು,  ಮಹಿಳಾ ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಆಶಾ ಸ್ಥಳೀಯ ಸೇವಾ ಪ್ರತಿನಿಧಿ ದುರ್ಗಮ್ಮ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಶಾ ನಿರೂಪಿಸಿದರು, ಸಂಜೀವ್ ಹೊಂದಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top