ಮಂಗಳೂರು: ಭಾರತೀಯ ಸಿನಿಮಾದಲ್ಲಿನ ಹೊಸ ಪ್ರತಿಭೆಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಮತ್ತು ಬೆಳೆಸುವ ಸಲುವಾಗಿ ಒಂದು ವಿನೂತನ ಲಾಭರಹಿತ ಯೋಜನೆಯಾಗಿರುವ ಸ್ಕ್ರೀನ್ ಅಕಾಡೆಮಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಮತ್ತು ಸ್ಕ್ರೀನ್ ಜಂಟಿಯಾಗಿ ಪ್ರಾರಂಭಿಸಿವೆ.
ಕಾನ್ಸ್ ಮತ್ತು ಆಸ್ಕರ್ ವಿಜೇತರಾದ ಗುನೀತ್ ಮೊಂಗಾ, ಪಾಯಲ್ ಕಪಾಡಿಯಾ, ರೆಸುಲ್ ಪೂಕುಟ್ಟಿ ಮತ್ತು ಹಿರಿಯ ಚಿತ್ರಕಥೆಗಾರರಾದ ಅಂಜುಮ್ ರಜಬಾಲಿ ಸೇರಿದಂತೆ ವಿವಿಧ ರೀತಿ ಸಾಧಕ ಸದಸ್ಯರನ್ನು ಹೊಂದಿರುವ ಈ ಅಕಾಡೆಮಿಯು ಭಾರತದ ಉನ್ನತ ಫಿಲ್ಮ್ ಸ್ಕೂಲ್‍ಗಳ ಜೊತೆಗೆ ಕೆಲಸ ಮಾಡಿ, ಮುಂದಿನ ಪೀಳಿಗೆಯ ಪ್ರತಿಭಾವಂತ ಫಿಲ್ಮ್ ಮೇಕರ್ ಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಪ್ರಾತಿನಿಧ್ಯ ಮತ್ತು ಮನ್ನಣೆ ಒದಗಿಸು ಮೂಲಕ ಸಬಲೀಕರಣಗೊಳಿಸಲಿದೆ ಎಂದು ಪ್ರಕಟಣೆ ಹೇಳಿದೆ.
ಲೋಧಾ ಫೌಂಡೇಶನ್ ನ ಸಂಸ್ಥಾಪಕ ಪೋಷಕ ಅಭಿಷೇಕ್ ಲೋಧಾ ಅವರ ನೆರವಿನೊಂದಿಗೆ ಸ್ಥಾಪಿತವಾಗಿರುವ ಸ್ಕ್ರೀನ್ ಅಕಾಡೆಮಿಯು ಅಸಾಧಾರಣ ಕಥೆಗಳನ್ನು ಹೇಳುವ ಸಾಮಥ್ರ್ಯವನ್ನು ಹೊಂದಿರುವ, ಆದರೆ ಔಪಚಾರಿಕ ಸಿನಿಮಾ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಂಪನ್ಮೂಲಗಳ ಕೊರತೆ ಇರುವ, ಫಿಲ್ಮ್ ಸ್ಕೂಲ್ ಗಳಿಂದ ನಾಮನಿರ್ದೇಶನಗೊಂಡ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸ್ನಾತಕೋತ್ತರ ಫೆಲೋಶಿಪ್ ಗಳನ್ನು ಒದಗಿಸುತ್ತದೆ. (ಅರ್ಜಿ ಸಲ್ಲಿಸುವ ವಿವರಗಳಿಗಾಗಿ www.screenacademy.org ಗೆ ಭೇಟಿ ನೀಡಿ).
2025ರ ಸ್ಕ್ರೀನ್ ಅಕಾಡೆಮಿ ಫೆಲೋಶಿಪ್ ಗಳು ಫಿಲ್ಮ್ ಆಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಪುಣೆ), ಸತ್ಯಜಿತ್ ರೇ ಫಿಲ್ಮ್ ಆಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ (ಕೋಲ್ಕತ್ತಾ), ಮತ್ತು ವಿಸ್ಲಿಂಗ್ ವುಡ್ಸ್ ಇಂಟರ್‍ನ್ಯಾಷನಲ್ (ಮುಂಬೈ) ಇವುಗಳಂತಹ ಪ್ರಮುಖ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಬೇಕಾಗುವ ಸಂಪೂರ್ಣ ಆರ್ಥಿಕ ಬೆಂಬಲವನ್ನು ಒದಗಿಸುತ್ತವೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ