ಮಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ಅಪಘಾತ ಮರಣ, ವೈದ್ಯಕೀಯ ಸೌಲಭ್ಯಗಳ ಮರುಪಾವತಿ, ವೃದ್ದಾಪ್ಯ ಪಿಂಚಣಿ ಮತ್ತು ಇತರ ಸಹಾಯಧನಗಳ ಪಾವತಿಯಲ್ಲಿ ಆಗಿರುವ ವಿಳಂಬ ಮತ್ತು ವಿವಿಧ ರೀತಿಯ ತೊಂದರೆಗಳನ್ನು ಪರಿಹರಿಸುವಂತೆ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳ ಭೇಟಿ ಮಾಡಿ ದೂರನ್ನು ನೀಡಿ ದಾಖಲೆಗಳನ್ನು ಕೂಡ ನೀಡಿ ಒತ್ತಾಯಿಸಲಾಯಿತು.
ಹಾಸನ ವಿಭಾಗದ ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತ ಎಚ್ ಎಲ್ ಗುರುಪ್ರಸಾದ್ ಹಾಗೂ ಮಂಗಳೂರು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಅವರು ಕಾರ್ಮಿಕರ ವೈಯಕ್ತಿಕ ದೂರುಗಳನ್ನು ಆಲಿಸಿ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಒದಗಿಸಿಕೊಡು ವುದಾಗಿ ಭರವಸೆಯನ್ನಿತ್ತರು.
ಕಾರ್ಮಿಕರ ವೈಯಕ್ತಿಕ ಸಮಸ್ಯೆಗಳಲ್ಲದೆ ಕೆಲವು ಕಾರ್ಮಿಕರ ಮಕ್ಳಳಿಗೆ ಟ್ಯಾಬ್‌ಗಳಲ್ಲಿ ಯಾವುದೇ ಅಪ್ಲಿಕೇಶನ್‌ಗಳು ಕೆಲಸ ಮಾಡದೇ ನಿರುಪಯೋಗಿ ಯಾಗಿರುವ ಕುರಿತು ನೂತನ ಪೋರ್ಟಲ್ ನ ತೊಂದರೆಗಳಾಗಿರುವ ಕುರಿತು ಈ ಬಗ್ಗೆ ಹಲವು ದೂರುಗಳ ಬಗ್ಗೆ ಕೂಡ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಯಿತು ಈ ಬಗ್ಗೆ ಉನ್ನತ ಅಧಿಕಾರಿಗಳು ಉತ್ತಮ ಸ್ಪಂದನೆಯನ್ನು ನೀಡಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಅದ್ಯತೆ ನೀಡಲಾಗುವುದು ಎಂದು ಭರವಸೆಯನ್ನಿತ್ತರು. ಈ ಕುರಿತು ತೊಂದರೆಗಳಾದ ಹಲವು ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿಎಂಎಸ್ ನ ರಾಜ್ಯ ಹಾಗೂ ಜಿಲ್ಲೆ ಹಾಗೂ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ