ಮಂಗಳೂರು: ವಿಶ್ವ ಭಾರತಿ ಫ್ರೆಂಡ್ ಸರ್ಕಲ್ (ರಿ)ಕೋಡಿಕಲ್ ಇವರ ವತಿಯಿಂದ ವಿಟಿ ರೋಡ್ ನಲ್ಲಿರುವ ಶ್ರೀನಿವಾಸ ಓರಿಯಂಟಲ್ ಶಾಲಾ ಮಕ್ಕಳಿಗೆ 25.000 ರೂಪಾಯಿ ಮೊತ್ತದ ಸಮವಸ್ತ್ರ ವನ್ನು ಮುಖ್ಯೋಪಾಧ್ಯಾಯರ ಸಮಕ್ಷಮದಲ್ಲಿ ವಿತರಿಸಲಾಯಿತು.
ವಿಶ್ವ ಭಾರತಿ ಫ್ರೆಂಡ್ ಸರ್ಕಲ್‌ನ ಅಧ್ಯಕ್ಷ ಶೀನ ನಾಯ್ಕ್ ಪೆರ್ಪುಲಾಡಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಮಾತಾಪಿತರಿಗೆ ಮತ್ತು ಶಾಲೆಗೆ ಕೀರ್ತಿ ತರುವ ಕಾರ್ಯವನ್ನು ಮಾಡಬೇಕು. ದೇಶದ ಪ್ರಜ್ಞಾವಂತ ನಾಗರಿಕರಾಗಿ ಬಾಳಬೇಕು ಎಂದು ನುಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಬಿ., ವಿಶ್ವಭಾರತಿ ಫ್ರೆಂಡ್ ಸರ್ಕಲ್ ಅಧ್ಯಕ್ಷ ಶೀನ ನಾಯ್ಕ್ ಪೆರ್ಪುಲಾಡಿ, ಕಾರ್ಯದರ್ಶಿ ಪುರುಷೋತ್ತಮ್ ನಾಯ್ಕ್, ಜೊತೆ ಕಾರ್ಯದರ್ಶಿ ದಿನೇಶ್ ಕೋಡಿಕಲ್, ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಜೋಗಟ್ಟೆ ಮತ್ತು ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಾಲೆಯ ಸಂಸ್ಕೃತ ಶಿಕ್ಷಕ ಅನಂತ ರಾಮ ಭಟ್ ನಿರೂಪಿಸಿದರು ಹಾಗೂ ಶಾಲೆಯ ಶಿಕ್ಷಕರೆಲ್ಲರೂ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ