ಯಕ್ಷಗಾನವು ಎಲ್ಲರನ್ನೂ ಸುಲಭವಾಗಿ ತಲುಪುವ ಕಲೆ: ಸಿ. ಎಸ್ ಭಂಡಾರಿ

Upayuktha
0


ಮಂಗಳೂರು: "ಇಂದು ಯಕ್ಷಗಾನವು ಪಂಡಿತ-ಪಾಮರರೆನ್ನುವ ಬೇಧವಿಲ್ಲದೇ ಎಲ್ಲರನ್ನೂ ಸುಲಭವಾಗಿ ತಲುಪುವ ಕಲೆಯಾಗಿದೆ. ಎಳೆಯ ಚಿಣ್ಣರೂ ಇದರ ನಾಟ್ಯಗಾರಿಕೆ ಮಾತುಗಾರಿಕೆಯನ್ನೂ ಕೈಗೂಡಿಸಿಕೊಂಡು ಬೆಳೆಯುತ್ತಿದ್ದಾರೆ. ಇದು ಈ ರಂಗದಲ್ಲಿ ಉತ್ತಮ ಬೆಳವಣಿಗೆ ಎಂಬುದು ಸಂತಸದ ವಿಷಯ. ಕಲಾ ಗೌರವ ಎಲ್ಲೆಡೆ ತುಂಬಿ ಹರಿಯಲಿ ಎಂದು ಉದ್ಯಮಿ, ಕಲಾಪೋಷಕ ಸಿ.ಎಸ್. ಭಂಡಾರಿಯವರು ಕದ್ರಿಯಲ್ಲಿ ನಡೆಯುತ್ತಿರವ ಯಕ್ಷ ಪಕ್ಷ- ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷನಾಗಿ ನುಡಿದರು.


ಸಾಧಕ ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಶಿಕ್ಷಕ, ಯಕ್ಷಲಹರಿ (ರಿ) ಸಂಸ್ಥೆಯ ಕಾರ್ಯದರ್ಶಿ ಕಲ್ಲ ಮುಂಡ್ಕೂರು ವಸಂತ ದೇವಾಡಿಗರು ಸನ್ಮಾನಕ್ಕೆ ಉತ್ತರಿಸುತ್ತಾ" ಯಕ್ಷಗಾನ ನಾಟಕವೇ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ನಿರಂತರ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಇದರಲ್ಲಿ ತುಂಬಾ ವಿಚಾರಗಳನ್ನು ತಿಳಿದಿದ್ದೇನೆ. ಇದು ನನಗೆ ಪ್ರಿಯವಾದ ಕಲೆಯೂ ಆಗಿದೆ. ಸರಯೂ ಸಂಸ್ಥೆಯ ಸನ್ಮಾನ ನನಗತ್ಯಂತ ಸಂತಸ ತಂದಿದೆ" ಎಂದರು.

ಗೌತಂ ಭಂಡಾರಿ, ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ್, ಮಧುಸೂದನ ವರ್ಕಾಡಿ, ಸುಧಾಕರ್  ಪೇಜಾವರ್, ವಿಶ್ವಾಸ್, ಅಕ್ಷಯ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top