ವಿಯೆಟ್ನಾಂ- ಎರಡನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧೆ: ಪುತ್ತೂರಿನ ಸಂಧ್ಯಾ ಎನ್ ಭಟ್ ಪ್ರಥಮ

Chandrashekhara Kulamarva
0


ಪುತ್ತೂರು: ಜೂನ್ 7 ರಂದು ವಿಯೆಟ್ನಾಂ ದೇಶದ ವೋಚಿಮಿನ್ ನಗರದಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧೆಯ ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಪುತ್ತೂರಿನ ಸಂಧ್ಯಾ ಎನ್ ಭಟ್ ರವರು ವಿಯೆಟ್ನಾo, ಆಸ್ಟ್ರೇಲಿಯಾ, ಕೊಂಬೋಡಿಯ ಹಾಗೂ ಭಾರತ ತಂಡಗಳ ನಡುವೆ ನಡೆದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಬಹುಮಾನ ಪಡೆದಿರುತ್ತಾರೆ.


ಇದೇ ಸಂದರ್ಭದಲ್ಲಿ, ಡಾ. ವಿಪ್ರ ಪಾಂಡೆ ಕನ್ಸಲ್ಟೆಂಟ್ ಜನರಲ್ ಆಫ್ ಇಂಡಿಯಾ ಇವರ ಸಮ್ಮುಖದಲ್ಲಿ ವಿಯಟ್ನಾಂನ ವಿ ಯೋಗ ವರ್ಲ್ಡ್ ಸಂಸ್ಥೆಯ C.E.O. ಯೋಗಾಚಾರ್ಯ ವಿಶ್ವನಾಥ್ ಕುಲಕರ್ಣಿ ಹಾಗೂ ಭಾರತದ ಅವಿಯ ಸಂಸ್ಥೆಯ ಮುಖ್ಯಸ್ಥ ಯೋಗಾಚಾರ್ಯ ತೀರ್ಥರಾಜ್ ಹೋಲೂರ್ ರವರು ಶ್ರೀಮತಿ ಸಂಧ್ಯಾ ಎನ್ ಭಟ್ ರವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ 'ಯೋಗ ಶಿಕ್ಷಕಿ' ಹಾಗೂ  ಅಂತರಾಷ್ಟ್ರೀಯ 'ಯೋಗರತ್ನ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.


ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಸಂಧ್ಯಾ ಎನ್ ಭಟ್ ಅವರು ಪುತ್ತೂರಿನ ರಾಜಕೀಯ ಭೀಷ್ಮ ದಿ| ಉರಿಮಜಲು ರಾಮ ಭಟ್ ಮತ್ತು ಸವಿತಾ ಭಟ್ ಅವರ ಸುಪುತ್ರಿ ಮತ್ತು ಪಟ್ಣಡ್ಕ ನಾರಾಯಣ ಭಟ್ಟರ ಪತ್ನಿ. ಇವರಿಗೆ ಹೆತ್ತವರು ಮತ್ತು ಕುಟುಂಬದವರು ಹಾಗೂ ಸಮಸ್ತ ಯೋಗ ಪರಿವಾರದವರು ಅಭಿನಂದನೆಗಳೊಂದಿಗೆ ಶುಭ ಹಾರೈಸಿದರು.


إرسال تعليق

0 تعليقات
إرسال تعليق (0)
To Top