ಜೂನ್ 29: ಕಾಸರಗೋಡಿನಲ್ಲಿ ಕಚುಸಾಪ ಅಂತರರಾಜ್ಯ 5ನೇ ಸಮ್ಮೇಳನ

Chandrashekhara Kulamarva
0



ಕಾಸರಗೋಡು: ಸ್ಥಳೀಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ  ಜೂನ್ 29 ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಭಾಂಗಣದಲ್ಲಿ ಕಚುಸಾಪ ಅಂತರರಾಜ್ಯ 5ನೆಯ ಸಮ್ಮೇಳನ ಏರ್ಪಡಿಸಿದೆ. ನಾಡಿನ ಹಿರಿಯ ಚಿಂತಕ ವಿ.ಬಿ. ಕುಳಮರ್ವ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮ್ಮೇಳನಕ್ಕೆ ಚಾಲನೆ ನೀಡುವರು.


ಉಡುಪಿಯ ಜ್ಯೋತಿಷ್ಯ ಪಂಡಿತ ವಿದ್ವಾನ್ ರಘುಪತಿ ಭಟ್ ಮುಖ್ಯ ಅತಿಥಿ, ಚುಟುಕು ಪುಸ್ತಕ ಲೋಕಾರ್ಪಣೆ  ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ‌ ಮಾಡುವರು, ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷ ಪ್ರೊ.ಜಿ.ಯು. ನಾಯಕ ಉಪಸ್ಥಿತರಿರುತ್ತಾರೆ.


ಇದೇ ಸಂದರ್ಭದಲ್ಲಿ ಬಾಲಕ ಅವನೀಶ ನೀಲಗುಂದ ಅವನಿಂದ ಮಯೂರ ವರ್ಮ ಏಕಪಾತ್ರ ಅಭಿನಯ, ಡಾ.ಗಂಗಯ್ಯ ಕುಲಕರ್ಣಿ, ರೇಖಾ ಸುದೇಶ ರಾವ್ ನಿರೂಪಣೆ ಮಾಡುವರು. ನಂತರ 11-30ಕ್ಕೆ ಶಿರಸಿಯ ಯಕ್ಷಗಾನ ತಜ್ಞ ಗಣಪತಿ ಭಟ್ಟ ವರ್ಗಾಸರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ, ಡಾ.ವಸಂತ‌ ನಾಯಕ ಆಶಯ ಭಾಷಣ, ಮೈಸೂರಿನ ಎನ್.ವಿ. ರಮೇಶ್, ಲತಾ ಮೋಹನ ಹಾಗೂ ಗದುಗಿನ ವೀರನಗೌಡ ಮರಿಗೌಡ ಉಪನ್ಯಾಸ ನೀಡುವರು.


ಹೊಸಪೇಟೆಯ ಎಲ್. ಹಾಲ್ಯಾ ನಾಯಕ ನಿರೂಪಿಸುವರು. ಮಧ್ಯಾಹ್ನ ಸಮಾರೋಪ ಹಾಗೂ ಕವಿಗೋಷ್ಟಿ ಡಾ. ಸುರೇಶ ನೆಗಲಗುಳಿ ಅಧ್ಯಕ್ಷತೆಯಲ್ಲಿ ಡಾ.ಕೆ.ಗೋವಿಂದ ಭಟ್ಟ ಆಶಯನುಡಿ, ಹಾವೇರಿಯ ಶೇಖರಗೌಡ ಪಾಟೀಲ ನಿರ್ಣಯ ಮಂಡನೆ ಮಾಡುವರು. ಪುತ್ತೂರು ವಿದ್ಯಾ ಬೇಕಲ್, ಡಾ.ರಮೇಶ ಅಂಬಿಗೇರ ನಿರೂಪಿಸುವರು. ನಾಡಿನ ಇಪ್ಪತ್ತು ಜನ ಕವಿಗಳು ಕವನ ವಾಚನ ಮಾಡುವರು. ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಸಂಘಟನೆಯ ಡಾ. ವಾಣಿಶ್ರೀ ಹಾಗೂ ತಂಡದಿಂದ ನೃತ್ಯ ಸಂಗೀತ ವೈಭವ, ನಂತರ ಹರಿಸರ್ವೋತ್ತಮ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top