ಪ್ರೀತಿಯ ಮೊದಲ ಪಾಠ: ಅಪ್ಪನ ಕೈಹಿಡಿದು ಆರಂಭಿಸಿದ ಜೀವಯಾನ ನಮ್ಮ ಬದುಕಿಗೆ ನಿಜವಾದ ಬೆಂಬಲ

Upayuktha
0


ಪ್ಪ ಎಂದರೆ ಪದಗಳಿಲ್ಲದ ಪಲ್ಲವಿ,  ವಾತ್ಸಲ್ಯದ ಸಾಗರ ಸದಾ ರಕ್ಷಾಕವಚ, ಕೊನೆಯೇ ಇಲ್ಲದ ದಿಗಂತ. ನಮ್ಮೆಲ್ಲರ ಬದುಕಿನ ಸೂಪರ್ ಹೀರೋ ಎಂದರೆ ಅಪ್ಪ ಬದುಕಿನ ಪ್ರತಿ ಗಳಿಗೆಯನ್ನು ಮಕ್ಕಳ ನಗುವಿಗಾಗಿ ಮೀಸಲಿಟ್ಟು ಹಗಲಿರುಳು ಎನ್ನದೇ ಕಷ್ಟಪಟ್ಟು ದುಡಿಯುವ ಜೀವ. ಇಂತಹ ಅದ್ಬುತ ವ್ಯಕ್ತಿತ್ವದ ತಂದೆಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.  ಪ್ರತಿಯೊಬ್ಬರ ಜೀವನದಲ್ಲಿ ತಂದೆಯ ಪಾತ್ರ ಬಹಳ ಮುಖ್ಯ. ಅವರ ಪ್ರೀತಿ ಬೆಂಬಲ ಮಾರ್ಗದರ್ಶನದಿಂದ ನಾವೆಲ್ಲ ಬದುಕನ್ನು ಕಟ್ಟಿಕೊಳ್ಳುತ್ತೇವೆ. ನಮ್ಮ ಬದುಕಿನ ಅಡಿಪಾಯ ಆದ ತಂದೆಯನ್ನು ಗೌರವಿಸುವುದು ಈ ದಿನದ ಮಹತ್ವ. 


ಅಪ್ಪ ಬೆಳೆಯುವ ಬಳ್ಳಿಗೆ ಆಸರೆ:

ಮಗಳನ್ನು ಗುರಿ ಮುಟ್ಟಿಸುವ ಹೊಣೆ ಮಗಳ ಭಾವನಾತ್ಮಕ ಶಕ್ತಿ ನಿಸ್ವಾರ್ಥ ಜೀವಿಯೇ ಅಪ್ಪ. ತಂದೆಯ ಮನಸು ಆಕಾಶದಂತೆ ವಿಶಾಲವಾದ ಪ್ರೀತಿ. ಅಪ್ಪ ಎನ್ನುವ ಎರಡಕ್ಷರದಲ್ಲಿ ಮಗಳ ಇಡೀ ಪ್ರಪಂಚವೇ ಇದೆ. ಅಪ್ಪನ ಪಾಲಿಗೆ ಮಗಳೇ ರಾಜಕುಮಾರಿ. ಮಗಳ ಪಾಲಿಗೆ ಅಪ್ಪನೇ ನಾಯಕ. ಅವರಿಬ್ಬರ ಸಂಬಂಧ ಮಾತಿನಲ್ಲಿ ವರ್ಣಿಸಲಾಗದು. 'ಕಪ್ಪೆ ಚಿಪ್ಪಿನೊಳಗೆ ಅಡಗಿರುವ ಮುತ್ತುಗಳ ಹಾಗೆ ಮಕ್ಕಳನ್ನು ಜೋಪಾನ ಮಾಡುತ್ತಾನೆ'.


ಅಮ್ಮ ಎನ್ನುವ ದೇವತೆ ಹೊತ್ತು ಹೆತ್ತು ಸಾಕಿ ಬೆಳೆಸಿದರೂ ಅಪ್ಪ ಅನ್ನೋ ಜೀವ ಮಗುವಿಗೆ ಬಲ. ಒಬ್ಬ ಗುರು, ಸ್ನೇಹಿತ,  ಮಾರ್ಗದರ್ಶಕನಾಗಿದ್ದುಕೊಂಡು ಮಕ್ಕಳ ಬದುಕನ್ನು ರೂಪಿಸಿ ಜೀವನ ಪಾಠ ಕಲಿಸಿ ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೆ ಹೃದಯಪೂರ್ವಕ ಕೃತಜ್ಞತೆ ಹೇಳುವ ದಿನವಿದು. ನನ್ನ ಜೀವನದ ಮಾರ್ಗದರ್ಶಕನಾದ ನನ್ನ ಪ್ರೀತಿಯ ತಂದೆಗೆ ಅಪ್ಪಂದಿರ ದಿನದ ಶುಭಾಶಯಗಳು.


"NO ONE IN THIS WORLD CAN LOVE A GIRL MORE THAN HER FATHER THE ONLY MAN WHO CAN SACRIFICE EVERYTHING FOR YOU"



- ಮಂಜುಳಾ ಪ್ರಕಾಶ್

ಎಂಸಿಜೆ, ಆಳ್ವಾಸ್ ಕಾಲೇಜು, ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top