ಸಾಲ್ವ್ ಫಾರ್ ಟುಮಾರೋ- ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ ಆಯೋಜಿಸಿದ ಸ್ಯಾಮ್ಸಂಗ್

Upayuktha
0


ಮಂಗಳೂರು: ಸ್ಯಾಮ್ಸಂಗ್ ಸಂಸ್ಥೆಯು 14–22 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ಸಾಲ್ವ್ ಫಾರ್ ಟುಮಾರೋ ಎಂಬ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯ ಭಾಗವಾಗಿ ಬೆಂಗಳೂರಿನ ಶಾಲಾ, ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ಸಾಲ್ವ್ ಫಾರ್ ಟುಮಾರೋ ಕಾರ್ಯಾಗಾರಗಳು ನಡೆದಿವೆ. 


ಏಪ್ರಿಲ್ 29 ರಂದು ಪ್ರಾರಂಭವಾಗಿರುವ ಈ ಸಂಶೋಧನಾ ಸ್ಪರ್ಧೆಯ ಈ ವರ್ಷದ ಯೋಜನೆಯನ್ನು ಸ್ಯಾಮ್ ಸಂಗ್ ಸಂಸ್ಥೆಯು ಡಿಸೈನ್ ಥಿಂಕಿಂಗ್ ಕಾರ್ಯಾಗಾರಗಳು ಮತ್ತು ಓಪನ್ ಹೌಸ್ ಗಳ ಸರಣಿಯ ಮೂಲಕ ಭಾರತದಾದ್ಯಂತ ನಡೆಸುತ್ತಿದೆ. ತಮ್ಮ ಸಮುದಾಯದಲ್ಲಿರುವ ನೈಜ ಪ್ರಪಂಚದ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಅರ್ಥಪೂರ್ಣ ತಂತ್ರಜ್ಞಾನ ಆಧರಿತ ಪರಿಹಾರೋತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


ಈ ವರ್ಷ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ವಿಜೇತ ತಂಡಗಳಿಗೆ 1 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದ್ದು, ಜೊತೆಗೆ ಅವರಿಗೆ ಪ್ರೊಟೊಟೈಪಿಂಗ್ ಮಾರ್ಗದರ್ಶನ, ಸ್ಯಾಮ್ಸಂಗ್ ನಾಯಕರು ಮತ್ತು ದೆಹಲಿ ಐಐಟಿಯ ತಜ್ಞ ಉಪನ್ಯಾಸಕರ ಮಾರ್ಗದರ್ಶನ ಮತ್ತು ಮೌಲ್ಯಯುತ ಇನ್ವೆಸ್ಟರ್ ಸಂಪರ್ಕ ಹೊಂದುವ ಅವಕಾಶಗಳನ್ನು ನೀಡಲಾಗುತ್ತದೆ. 


ಈ ಕುರಿತು ಮಾತನಾಡಿರುವ ವಿದ್ಯಾರ್ಥಿನಿ ರಿತ್ವಿಕಾ ಅವರು, “ಇಲ್ಲಿ ನಡೆದ ಕಾರ್ಯಾಗಾರವು ನನಗೆ ನಿಜವಾಗಿಯೂ ಭಿನ್ನವಾಗಿ ಯೋಚಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಕೇವಲ ಐಡಿಯಾಗಳ ಬಗ್ಗೆ ಮಾತ್ರವಲ್ಲ, ಅವುಗಳನ್ನು ಯೋಜಿಸಿ ರೂಪಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿ ದೊರೆಯಿತು. ನಮ್ಮ ಸುತ್ತಲಿನ ತ್ಯಾಜ್ಯ ನಿರ್ವಹಣೆ ಕುರಿತು ನಾನು ಯಾವಾಗಲೂ ಆಲೋಚಿಸುತ್ತಿದ್ದೆ. ಈಗ, ಸ್ಯಾಮ್ಸಂಗ್ ಸಾಲ್ವ್ ಫಾರ್ ಟುಮಾರೋ ಮೂಲಕ ನಾನು ತ್ಯಾಜ್ಯ ವಿಂಗಡಣಾ ವ್ಯವಸ್ಥೆಯನ್ನು ರೂಪಿಸಲು ಕೆಲಸ ಮಾಡಲು ಬಯಸುತ್ತೇನೆ. ಒಟ್ಟಾರೆಯಾಗಿ ಈ ಯೋಜನೆ ನಾವು ಕೇವಲ ವಿದ್ಯಾರ್ಥಿಗಳಲ್ಲ, ಸಮಸ್ಯೆ ಪರಿಹಾರ ಮಾಡುವವರಾಗಿ ರೂಪುಗೊಳ್ಳಬಹುದು ಎಂದು ತಿಳಿಸಿತು” ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top