1 ಕಪ್ ಹಲಸಿನ ಬೇಳೆ ಹೊರಗಿನ ಸಿಪ್ಪೆ ತೆಗೆದು ಕುಕ್ಕರಿನಲ್ಲಿ ಹಾಕಿ ಅದು ಮುಳುಗುವಷ್ಟು ನೀರು ಹಾಕಿ 6 ವಿಸಿಲ್ ಬರುವ ತನಕ ಬೇಯಿಸಿ.
ಸ್ವಲ್ಪ ಆರಿದ ಬಳಿಕ ನೀರೆಲ್ಲಾ ಸೋಸಿ ಬೇಳೆಯ ಹೊರಗಿನ ಕಂದು ಬಣ್ಣದ ಸಿಪ್ಪೆಯನ್ನು ಸಾಧ್ಯ ಆದಷ್ಟು ತೆಗೆದು ನುಣ್ಣಗೆ ಪುಡಿ ಮಾಡಿ.
ಇದಕ್ಕೆ ತಲಾ 2 ಚಮಚ ಹಾಲಿನ ಪುಡಿ, ಮೈದಾ (ಅಥವಾ ಚಿರೋಟಿ ರವೆ), ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ. ಒಂದು ಚಮಚ ತುಪ್ಪ ಹಾಕಿ ಹದ ಮಾಡಿ 10ನಿಮಿಷ ಮುಚ್ಚಿ ಇಡಿ. (ಹಿಟ್ಟು ಕೈಗೆ ಅಂಟದಷ್ಟು ಗಟ್ಟಿ ಇರಬೇಕು.)
ಜಾಮೂನ್ ಗೆ ಮಾಡುವಂತೆ (1.5 ಕಪ್ ಸಕ್ಕರೆ+ ಅದು ಮುಳುಗುವಷ್ಟು ನೀರು) ಎಳೆ ಸಕ್ಕರೆ ಪಾಕ ಮಾಡಿ ಅರ್ಧ ಚಮಚ ವೆನಿಲ್ಲಾ ಎಸೆನ್ಸ್ (ಅಥವಾ ಏಲಕ್ಕಿ ಪುಡಿ) ಬೆರಸಿಡಿ.
ಎಣ್ಣೆಗೆ ಸ್ವಲ್ಪ ತುಪ್ಪ ಹಾಕಿ ಕಾಯಲಿಡಿ. ಕೈಗೆ ತುಪ್ಪದ ಪೈಸೆ ಮಾಡಿ ಜಾಮೂನ್ ಉಂಡೆ ಮಾಡಿ ಹದವಾಗಿ ಕಾದ ತುಪ್ಪ+ಎಣ್ಣೆಯಲ್ಲಿ ತಲಾ 7-8 ರಂತೆ ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದನ್ನು ಒಂದು ತಟ್ಟೆಗೆ ತೆಗೆದು ಇಡಿ. ಸ್ವಲ್ಪ ಆರಿದ ನಂತರ ಸಕ್ಕರೆ ಪಾಕಕ್ಕೆ ಹಾಕಿಡಿ.
ಅರ್ಧ ಗಂಟೆಯ ನಂತರ ತಿನ್ನಲು ಬಳಸಿ.
- ಸವಿತಾ ಯಸ್ ಭಟ್, ಅಡ್ವಾಯಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ