ಬಂಟ್ವಾಳ: ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಕಂದಮ್ಮ ಮನಸ್ವಿನಿಳಿಗೆ ಅರೋಗ್ಯದಲ್ಲಿ ಬ್ಲಡ್ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಪುಟ್ಟ ಮಗು ಗುಣಮುಖವಾಗಲು ಹೆಚ್ಚಿನ ಚಿಕಿತ್ಸೆ ಅತ್ಯಾವಶ್ಯಕವಾಗಿತ್ತು. ಬೆಂಗಳೂರು ಎನ್.ಎಸ್. ನಾರಾಯಣ ಆಸ್ಪತ್ರೆಯ ಚಿಕಿತ್ಸೆ ವೆಚ್ಚಕ್ಕಾಗಿ ಮಗುವಿನ ಪೋಷಕರು ಸರ್ವರಲ್ಲಿಯೂ ವಿನಂತಿ ಮಾಡಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದನ್ನು ಗಮನಿಸಿದ ಶ್ರೀವೀರ -ವಿಕ್ರಮ ಜೋಡುಕರೆ ಕಂಬಳ ಸಮಿತಿ, ಸಿದ್ದಕಟ್ಟೆ -ಕೊಡಂಗೆ ಇದರ ಪದಾಧಿಕಾರಿಗಳು ತಕ್ಷಣವೇ ಸ್ಪಂದಿಸಿ ಮಗುವಿನ ಕುಟುಂಬವನ್ನೂ ಸಂಪರ್ಕ ಮಾಡಿ ಯೋಗಕ್ಷೇಮ ವಿಚಾರಿಸಿ ಸಣ್ಣ ಮಟ್ಟದ ಆರ್ಥಿಕ ಸಹಾಯವನ್ನು ಮಗುವಿನ ತಾಯಿ ಸೌಮ್ಯರವರಿಗೆ ನೀಡಿದರು.
ಈ ಸಂದರ್ಭದಲ್ಲಿ ವೀರ -ವಿಕ್ರಮ ಕಂಬಳ ಸಮಿತಿ, ಸಿದ್ದಕಟ್ಟೆ-ಕೊಡಂಗೆ ಇದರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೋಡುಂಬ, ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಪದಾಧಿಕಾರಿಗಳಾದ ಚಂದ್ರಶೇಖರ ಪೂಜಾರಿ ಕೊಡಂಗೆ, ಕಿರಣ್ ಕುಮಾರ್ ಕಾಮಧೇನು ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರ್ಡಡಿ, ಮಧುಸೂದನ್ ಸಾಲಿಯಾನ್, ಪ್ರಮುಖರಾದ ಸತೀಶ್ ಪೂಜಾರಿ ಅಲಕ್ಕೆ, ಪ್ರಭಾಕರ ಪ್ರಭು, ತೇಜಸ್ ಪೂಜಾರಿ ಕರ್ಪೆ, ಯೋಗೀಶ್ ಪೂಜಾರಿ ಕರ್ಪೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ