ಅಧ್ಯಕ್ಷ: ಡಾ. ಹಾಜಿ ಎಸ್ ಅಬೂಬಕ್ಕರ್, ಉಪಾಧ್ಯಕ್ಷೆ: ಶ್ರೀಮತಿ ಲಲಿತಾ ಸೂರಂಬೈಲು
ಕಾರ್ಯದರ್ಶಿ: ಭಾಸ್ಕರ ಪೂಜಾರಿ ನಡುಕಟ್ಟ
ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಮಕ್ಕಳ ಪೋಷಕರ ಸಭೆ ಜೂ 28ರಂದು ನಡೆಯಿತು.
ಸಭೆಯಲ್ಲಿ -2025-2026 ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಾಲಾ ಹಿರಿಯ ವಿದ್ಯಾರ್ಥಿ ಡಾ.ಹಾಜಿ ಎಸ್ ಅಬೂಬಕ್ಕರ್ ಅರ್ಲಪದವು, ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತಾ ಸೂರಂಬೈಲು ಹಾಗೂ ಕಾರ್ಯದರ್ಶಿಯಾಗಿ ಭಾಸ್ಕರ ಪೂಜಾರಿ ನಡುಕಟ್ಟ ಆಯ್ಕೆಯಾದರು.
ಸದಸ್ಯರು: ಪುರಂದರ ಒಡ್ಯ, ಬಶೀರ್ ಪಾರ್ಪಳ, ಅಬ್ದುಲ್ ಆರಿಫ್ ತಲಪ್ಪಾಡಿ, ಭವಾನಿ ಸೂರಂಬೈಲು, ರೂಪ ಬಿ ಸ್ವರ್ಗ, ಅಣ್ಣಪ್ಪ ನಾಯ್ಕ ಭರಣ್ಯ, ವೇಣುಗೋಪಾಲ ಕೆದುವಾರು, ಸತೀಶ್ ಆರ್ಲಪದವು, ಕೃಷ್ಣ ಮೋಹನ ಸ್ವರ್ಗ, ಹಮೀದ್ ಕೆದುವಾರು, ರಫೀಕ್ ಕಕ್ಕೂರು, ಹೇಮಾವತಿ ಸೂರಂಬೈಲು.
ಅಕ್ಷರ ದಾಸೋಹ ತಾಯಂದಿರ ಸಮಿತಿ
ಸವಿತಾ ಮಿತ್ತಡ್ಕ, ಲತಾ ತೂಂಬಡ್ಕ, ಜಯಲಕ್ಷ್ಮಿ ಸ್ವರ್ಗ, ವಸಂತಿ ತೂ0ಬಡ್ಕ, ಸುಮತಿ ಅರ್ಧಮೂಲೆ, ಮೈಮುನ ಅರ್ಲಪದವು, ಫಾತಿಮತ್ ರಜಿಯ ತಲಪ್ಪಾಡಿ, ಕವಲತ್ ನೆಲ್ಲಿತ್ತಿಮಾರು, ಜಯಶ್ರೀ ತೂಂಬಡ್ಕ, ವೀಣಾ ಕಲ್ಲಪದವು, ಪ್ರಮೀಳಾ ತೂಂಬಡ್ಕ
ಮಕ್ಕಳ ಸುರಕ್ಷತಾ ಸಮಿತಿ
ಮಹಾಲಿಂಗ ನಾಯ್ಕ ಅರ್ಧಮೂಲೆ, ಮಮತಾ ತೂಂಬಡ್ಕ, ಚಂದ್ರಾವತಿ ಅರ್ಧಮೂಲೆ, ಪುಷ್ಪ ಮಲೆತ್ತಡ್ಕ ಸ್ವರ್ಗ, ಕುಶಾಲಪ್ಪ ಗೌಡ ಮಿತ್ತಡ್ಕ, ಅಂಬಿಕಾ ಭರಣ್ಯ, ಪ್ರೇಮ ಪಡ್ಯ0ಬೆಟ್ಟು, ಸಿದ್ದೀಕ್ ಕಲ್ಲಪದವು, ಸೀತಾ ಕಾಕೆಕೊಚ್ಚಿ.
ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ಹಾಜಿ ಎಸ್ ಅಬೂಬಕ್ಕರ್ ಅರ್ಲಪದವು ಮಾತನಾಡಿ ಶಾಲೆ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಎಲ್ಲಾ ಪೋಷಕರು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲ ಕೆ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನ ಎಸ್ ಪ್ರಾರ್ಥಿಸಿ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರು ಶಾಲೆಯಲ್ಲಿ ಮಕ್ಕಳು ಅನುಸರಿಸಬೇಕಾದ ನಿಯಮಗಳು ಮತ್ತು ನಿಬಂಧನೆಗಳನ್ನು ಪೋಷಕರಿಗೆ ತಿಳಿಹೇಳಿದರು ಹಾಗೂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ