ಹಿರಿಯ ಚೇತನ ಮಹದೇವಪ್ಪ ಕಡೇಚೂರ್ ಗೆ ಗಣ್ಯರ ಗೌರವ ನಮನ

Upayuktha
0

ಆದರ್ಶದ ಬಾಳ್ವೆ ನಡೆಸಿದ ಬಿಜೆಪಿಯ ಮಹಾನ್ ಮುಂದಾಳು: ಜಾಧವ್




ಕಲಬುರಗಿ: ಆರ್ ಎಸ್ ಎಸ್ ಬಿಜೆಪಿ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಚೇತನ ಮಹದೇವಪ್ಪ ಕಡೆಚೂರು ಅಗಲು ವಿಕೆಯಿಂದ ಶೂನ್ಯ ಸೃಷ್ಟಿಯಾಗಿದ್ದು ಅವರ ಆದರ್ಶದ ಬಾಳ್ವೆ ಮುಂದಿನ ಜನಾಂಗಕ್ಕೆ ಮಾದರಿ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.


ಕಲಬುರಗಿಯ ಜಗತ್ ಬಡಾವಣೆಯಲ್ಲಿ ಜೂನ್ 28ರಂದು ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಕಡೇಚೂರ್ ಹಿಂದುಳಿದ ವರ್ಗದಿಂದ ಹುಟ್ಟಿ ಬಂದು ಸಮಾಜವನ್ನು ಆದರ್ಶ ಪರಂಪರೆಯಲ್ಲಿ ಕಟ್ಟಿಕೊಡಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಕಾಯಕಜೀವಿ. ನಾಡು ನುಡಿಗಾಗಿ ಹೋರಾಟ ಮಾಡಿದ ಮೀಸಲಾತಿಯಾಗಿದ್ದು ಹೈದರಾಬಾದ್ ಸಂಸ್ಥಾನ ವಿಮೋಚನೆಯಲ್ಲಿ ಹೋರಾಟದ ಕಣದಲ್ಲಿದ್ದು ಈ ಭಾಗಕ್ಕೆ ಸ್ವಾತಂತ್ರ್ಯ ನೀಡುವಲ್ಲಿ ಅಗ್ರಗಣ್ಯರಾದವರು. ಇವರು 1951  ರಲ್ಲಿ  ಆರೆಸ್ಸೆಸ್ ನ  ಸ್ವಯಂಸೇವಕನಾಗಿ ಬೆಳೆದು ನಂತರ  ಅಹರ್ನಿಶಿ ದುಡಿಮೆಯಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ 


ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ.ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದು ಪಕ್ಷವನ್ನು ಕಟ್ಟಿದ ಮಹಾನ್ ನಾಯಕರ ಕೊಡುಗೆ ಹಾಗು ಅವರ ಆದರ್ಶದ ಬದುಕು ಪಕ್ಷಕ್ಕೆ ಹಾಗೂ ಮುಂದಿನ ಜನಾಂಗಕ್ಕೆ ದಾರಿದೀಪವಾಗಲಿದೆ ಎಂದರು. ಶಿಕ್ಷಕ ಪತ್ರಿಕೋದ್ಯಮಿ, ಸಮಾಜ ಸೇವಕ ಹಾಗೂ ಉದ್ಯಮಿಯಾಗಿ ಎಲ್ಲ ರಂಗಗಳಲ್ಲೂ ಪ್ರಾಮಾಣಿಕತೆಯಿಂದ ಜನಪ್ರಿಯರಾದವರು. ನೇರ ನಡೆ ನುಡಿಯ ವ್ಯಕ್ತಿತ್ವದ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ ಎಂದರು. 


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ಜಗದೇವ ಗುತ್ತೇದಾರ್, ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್, ಉದ್ಯಮಿಗಳಾದ ರಾಘವೇಂದ್ರ ಮೈ ಲಾಪುರ್, ಸತೀಶ್ ವಿ ಗುತ್ತೇದಾರ್, ಮಹಾದೇವ ಗುತ್ತೇದಾರ್, ಚಂದ್ರಕಾಂತ ಗುದಗಿ, ನ್ಯಾಯವಾದಿ ರಾಜಶೇಖರ್ ಹಿರೇಮಠ್, ರಾಜ್ಯ ಸರ್ಕಾರದ ಮಾಜಿ ಸಲಹೆಗಾರರಾದ ಕೇದಾರನಾಥ ಮುದ್ದಾ, ಚಂದ್ರಕಾಂತ ಗುದಗಿ, ಪುರುಷೋತ್ತಮ ಸುವರ್ಣ ಮಂಗಳೂರು, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಮತ್ತಿತರ ಅನೇಕ ಗಣ್ಯರು ಇದ್ದರು. ವೆಂಕಟೇಶ್ ಕಡೇಚೂರ್ ಸರ್ವರನ್ನು ಸ್ವಾಗತಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top