ಸ್ಫೂರ್ತಿ ಸೆಲೆ: ಸಂಬಂಧಗಳ ಸುತ್ತಮುತ್ತ

Upayuktha
0


ಹಲೋ, ಹೇಗಿದ್ದೀರಾ?

ಸಂಬಂಧಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಸಂಬಂಧಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಆಕ್ರಮಿಸಿ ಕೊಂಡಿವೆ. ಸಂಬಂಧಗಳು ನಮ್ಮ ಜೀವನದಲ್ಲಿ ರಕ್ತ ಸಂಬಂಧಗಳು, ಸ್ನೇಹ ಸಂಬಂಧಗಳು, ವೃತ್ತಿ. ಸಂಬಂಧಗಳು ಒಂದೊಂದಾಗಿ ನಮ್ಮ ಜೀವನವನ್ನು ಆಕ್ರಮಿಸಿ ನಮ್ಮ ಜೀವನಕ್ಕೆ ಒಂದು ತರಹದ ಅರ್ಥ ಕಲ್ಪಿಸಿವೆ.


ಇಂಗ್ಲೀಷಿನಲ್ಲಿ ಅದಕ್ಕೆ ಹೇಳುತ್ತಾರೆ "Man is born free but he is surrounded by chains.

ಆದರೆ ಸಂಬಂಧಗಳು ಅಷ್ಟು ಸುಲಭವಾಗಿಲ್ಲ. ಕೆಲವೊಂದು ಸಾರಿ ಹಣ, ಯಶಸ್ಸು, ಸಮಯ ಸಾಧಕತನ ಸಂಬಂಧಗಳ ಮೇಲೆ ಸವಾರಿ ಮಾಡಿ ಬಿಡುತ್ತವೆ. "If money and success are there, then strangers becomes relatives,and if there is no money, then relatives becomes strangers" ಇದು ಸಂಬಂಧಗಳ ಬಣ್ಣ ಬದಲಾಯಿಸುವಿಕೆಯನ್ನು ತೋರಿಸಿ ಕೊಡುತ್ತದೆ. ಆದರೆ ಕೆಲವೊಂದು ಸಂಬಂಧಗಳು ಅವುಗಳೆಲ್ಲವನ್ನೂ ದಾಟಿ ಇರುತ್ತವೆ. ಕೃಷ್ಣ, ಕುಚೇಲರ ಸಂಬಂಧ, ಎಲ್ಲ ಶಕ್ತಿ ಸಾಮರ್ಥ್ಯ ಇದ್ದರೂ ಯುಧಿಷ್ಠಿರನನ್ನು ಹಿಂಬಾಲಿಸಿದ ಪಾಂಡವರು, ಕೊನೆಯ ತನಕ ರಾಮನನ್ನು ಹಿಂಬಾಲಿಸಿದ ಲಕ್ಷ್ಮಣ, ಇವರ ಸಂಬಂಧಗಳನ್ನು ಪಾಲಿಸಿದ ನಿಷ್ಠೆಗೆ ಸಾಟಿಯಿಲ್ಲ.


ಹಾಗಂತ ನಾವು ಸಂಬಂಧಗಳನ್ನು ತ್ಯಜಿಸಲು ಸಾಧ್ಯವಿಲ್ಲ, ಹುಟ್ಟಿದಾಗ ಎತ್ತಿ ಕೊಳ್ಳಲು, ಸತ್ತಾಗ ಹೊರಲು ನಾಲ್ಕು ಭುಜಗಳು ಬೇಕು ಎನ್ನುವುದು ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.


ಆದರೆ ಸಂಬಂಧಗಳನ್ನು ನಿಭಾಯಿಸಲು, ಕೆಲವೊಮ್ಮೆ ಅಹಂ ತೊರೆದು ಬಾಗ ಬೇಕಾಗುತ್ತದೆ.ಆದರೆ ಪ್ರತಿ ಸಲ ನಾವೇ ಬಾಗುವುದಾದರೆ ಅಂತಹ ಸಂಬಂಧದ ಅವಶ್ಯಕತೆ ಇಲ್ಲ.


ನಮ್ಮ ತಂದೆಯವರು ಹೇಳುತ್ತಿದ್ದರು "ರಕ್ತ ಸಂಬಂಧಿಕರು, ರಕ್ತ ಹೀರುವ ಸಂಬಂಧಿಕರಾದರೆ ಅದು ಜೀವನದ ದೊಡ್ಡ ದುರಂತ" ಎಂದು ಹೇಳುತ್ತಿದ್ದರು.

ಸಂಬಂಧಗಳು ನಮ್ಮ ಮುಷ್ಟಿಯಲ್ಲಿ ಇದ್ದರೆ ಅವು ಹೊರಗೆ ಹೋಗಲು ಪ್ರಯತ್ನ ಪಡುತ್ತವೆ. ಆದರೆ possesiveness ಬಿಟ್ಟರೆ ಅವು ನಮ್ಮ ಸನಿಹದಲ್ಲಿ ಇರುತ್ತವೆ.


Blood is thicker than water ಎಂದು ಹೇಳುವಂತೆ ಅಂಗಾಲಿಗೆ ಹೇಸಿಕೆ ಇಲ್ಲ, ಕರುಳಿಗೆ ನಾಚಿಕೆಯಿಲ್ಲ ಎನ್ನುವಂತೆ ನಾವು ಭೂಮಿಯ ಮೇಲೆ ಇದ್ದಷ್ಟು ಅವು ನಮ್ಮನ್ನು ಸೌರ ವ್ಯೂಹದಲ್ಲಿ ಗ್ರಹಗಳು ಸೂರ್ಯನನ್ನು ಸುತ್ತು ವರೆದಂತೆ ಅವು ನಮ್ಮನ್ನು ಸುತ್ತುವರೆಯುತ್ತಿರುತ್ತವೆ.

ಉತ್ತಮ ಸಂವಹನ, ಕಷ್ಟ ಕಾಲದಲ್ಲಿ ಆದಷ್ಟು ಸಹಾಯ, ಒಂದಿಷ್ಟು ಕಾಳಜಿ ಇದ್ದರೆ ಎಲ್ಲ ಸಂಬಂಧಗಳು ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ ಅಲ್ಲವೇ?

ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top