ಜ್ಞಾನಭಾರತಿ: ನಹಿ ಜ್ಞಾನೇನ ಸದೃಶಂ... ಅಲ್ಲ, ನಹಿ ಜ್ಞಾನ...

Upayuktha
0
ಸಂಶೋಧನಾ ಬ್ಲಾಕ್‌ಗಾಗಿ  419 ಮರ ಕಡೀತಾರಂತೆ ಇವರು...


ಚಿತ್ರ ಕೃಪೆ: ಪ್ರಜಾವಾಣಿ



419 ಮರಗಳನ್ನು ಕಡಿದು ಸಂಶೋಧನಾ ಬ್ಲಾಕ್ ಮಾಡಲಾಗುವುದು!? ಏನು ಸಂಶೋಧನೆ ಮಾಡ್ತಾರೆ ಅಲ್ಲಿ?


ಬಹುಶಃ:


1) ಮರಗಳನ್ನು ಕಡಿದು ತೆಗೆದರೆ ಪರಿಸರದ ಮೇಲೆ ಯಾವ ಪರಿಣಾಮ ಬೀರುತ್ತದೆ? ಸಂಶೋಧನೆ.


2) 419 ಮರಗಳನ್ನು ತೆಗೆದರೆ ವಾತಾವರಣದಲ್ಲಿ ಎಷ್ಟು ಆಮ್ಲಜನಕ ವ್ಯತ್ಯಾಸ ಉಂಟಾಗುತ್ತದೆ?- ಪ್ರಯೋಗ.


3) ಮರಗಳನ್ನು ಕತ್ತರಿಸಿ ತೆಗೆದು ಜೈವಿಕವನ ಮಾಡುವುದು ಹೇಗೆ?- ಅಧ್ಯಯನ.


4) ಜ್ಞಾನ ಭಾರತಿಯಲ್ಲಿ ಮರಗಳನ್ನು ಕಡಿದು, ಕೊಠಡಿ ನಿರ್ಮಿಸಿದರೆ, ವರ್ಷಕ್ಕೆ ಎಷ್ಟು ಜನರಿಗೆ ಜ್ಞಾನ ಸಂಪತ್ತನ್ನು ನೀಡಬಹುದು? - ಸಂಖ್ಯಾತ್ಮಕ ತುಲನೆ


5) ಗ್ರೀನ್ ಬ್ಲಾಕ್‌ಗಳನ್ನು ತೆಗೆದು, ಗ್ರೇ (ಸಿಮೆಂಟ್) ಬ್ಲಾಕ್‌ಗಳನ್ನು ನಿರ್ಮಿಸಿದರೆ ಉಷ್ಣಾಂಶ ವ್ಯತ್ಯಾಸದ ಬಗ್ಗೆ ಒಂದು ಸೂಕ್ಷ್ಮ ನ್ಯಾನೋ ಅಧ್ಯಯನ


6) ಅಶೋಕ ಮರ, ಬಾಗೆಮರ, ತಾರೆಮರ, ಮತ್ತಿ, ತುಪರೆಮರ, ಹೊನ್ನೆ, ಕಕ್ಕೆ, ಬನ್ನಿ, ಹುಣಸೆ, ಕಮರ, ಬಸವನಪಾದ, ಬೇಲದಮರ, ಬೀಟೆಮರಗಳನ್ನು ಕಡಿದು ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವುದು ಹೇಗೆ? ಒಂದು ರೀಸರ್ಚ್.


7) ಆರು ಲಕ್ಷ ಸಸಿ ನೆಟ್ಟು ಬೆಳಸುತ್ತಿರುವ ಜ್ಞಾನ ಭಾರತಿಯಲ್ಲಿ ಈ ಹಳೇ ಕಾಲದ, ವೃದ್ಧ, ವಯಸ್ಸಾದ ಅಶೋಕ, ಬಾಗೆ, ತಾರೆ, ಮತ್ತಿ, ತುಪರೆ, ಹೊನ್ನೆ, ಕಕ್ಕೆ, ಬನ್ನಿ, ಹುಣಸೆ, ಕಮರ, ಬಸವನಪಾದ, ಬೇಲ, ಬೀಟೆಮರಗಳನ್ನು ಕಡಿದರೆ, ಹೊಸ ನೆಟ್ಟ ಸಸಿಗಳಿಗೆ ಒಳ್ಳೆಯ ಮತ್ತು ಯಥೇಚ್ಛವಾಗಿ ಪೌಷ್ಟಿಕಾಂಶಗಳು ಹೇಗೆ/ಎಷ್ಟು ದೊರೆಯುತ್ತವೆ? ಒಂದು ಸ್ಟಡಿ.


**


ಸಂಶೋಧನೆಯಲ್ಲಿ 

ಮೂಲಭೂತ ಸಂಶೋಧನೆ, 

ಅನ್ವಯಿಕ ಸಂಶೋಧನೆ ಮತ್ತು 

ಕ್ರಿಯಾ ಸಂಶೋಧನೆ ವಿಧಗಳಿವೆ. 


ಮೂಲಭೂತ ಸಂಶೋಧನೆಯು ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದರೆ, 


ಅನ್ವಯಿಕ ಸಂಶೋಧನೆಯು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. 


ಕ್ರಿಯಾ ಸಂಶೋಧನೆಯು ಸ್ಥಳೀಯ ಸಂದರ್ಭದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಮಾಹಿತಿಯನ್ನು ಬಳಸುವ ಗುರಿಯನ್ನು ಹೊಂದಿದೆ.


ಇಂತಹ ಮೂಲಭೂತ, ಅನ್ವಯಿಕ ಮತ್ತು ಕ್ರಿಯಾ ಸಂಶೋಧನೆಗಳಿಗೆ ಆಧುನಿಕ ವ್ಯವಸ್ಥೆಯೇ ಇರಬೇಕು!! ಅಪ್ಪ ನೆಟ್ಟ ಆಲದಮರಗಳಿಗೆ ನೇಣು, ಕೊಡಲಿ ಹಾಕಿ ಕತ್ತರಿಸಿ ತೆಗೆಯಬೇಕು.  


ಮಾಡ್ರನ್ ಎಜುಕೇಷನ್ ಇನ್ಷ್ಯೂಷನ್ಸ್ ಹ್ಯಾವ್ ಪ್ರೊಡ್ಯೂಸಿಂಗ್ ಎಜುಕೇಟೆಡ್ ರ್‍ಯಾಸ್ಕಲ್ಸ್ (ದುಷ್ಟರು)


ಸಾಧ್ಯವಾದರೆ, ಇನ್ನೂ ಒಂದು ಮರವನ್ನು ಸೇರಿಸಿ ಕಡಿಯಲಿ!!! ಅಲ್ಲಿಗೆ 420 ಭರ್ತಿ ಆಗುತ್ತೆ.  


ಜ್ಞಾನ ಭಾರತಿಯವರ ನಹಿ ಜ್ಞಾನೇನ ಸದೃಶಂ ಎಂದರೆ ಜ್ಞಾನ ಭಾರತಿಯವರ ಸಂಶೋಧನಾ ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ ಎಂದರ್ಥ!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top