Fathers Day: ಪಿತೃ ದೇವೋ ಭವ

Chandrashekhara Kulamarva
0


ನಾವು ಎಲ್ಲಾ ದಿನಾಚರಣೆಯನ್ನು ಆಚರಿಸುತ್ತೇವೆ. ಆದರೆ ತಂದೆಯರ ದಿನಾಚರಣೆ ತುಂಬ ವಿಶಿಷ್ಟ. ನಮ್ಮ ಜೀವನದಲ್ಲಿ ಅಪ್ಪ ಎಂದರೆ ನಮ್ಮ ಪಾಲಿಗೆ ಹೀರೋ. ತಂದೆಯ ಸ್ಥಾನವನ್ನು ಜಗತ್ತಿಗೆ ತೋರಿಸಿದ ವ್ಯಕ್ತಿ ಎಂದರೆ ವಸುದೇವ ಎಂದು ಹೇಳಬಹುದು. ಮಳೆಯನ್ನು ಲೆಕ್ಕಿಸದೆ ಕೃಷ್ಣನನ್ನು ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತುಕೊಂಡು ಗೋಕುಲಕ್ಕೆ ತಂದು ಬಿಟ್ಟು ಹೋಗದಿದ್ದರೆ ನಮಗೆ ಕೃಷ್ಣನು ಸಿಗುತ್ತಿರಲಿಲ್ಲ ಮತ್ತು ಭಗವದ್ಗೀತೆ ಸಿಗುತ್ತಿರಲಿಲ್ಲ. ತಂದೆಯ ಸ್ಥಾನ ಮತ್ತು ತ್ಯಾಗ ಅಷ್ಟು ದೊಡ್ಡದು.


ನಮ್ಮಲ್ಲಿ ಮಾತೃ ದೇವೋ ಭವ ಮೊದಲು ಹೇಳಿ ನಂತರ ಪಿತೃ ದೇವೋ ಭವ ಎಂದು ಹೇಳುತ್ತೇವೆ. ಆದರೆ ತಂದೆಯ ತ್ಯಾಗ ಎಲೆಮರೆಯ ಕಾಯಿಯಂತೆ. ನಮ್ಮಲ್ಲಿ ಮೊದಲು "ಅಪ್ಪ" ಎಂದರೆ ಬೇರೆಯೇ ಕಲ್ಪನೆ ಇರುತ್ತಿತ್ತು. ಕಣ್ಣು ಕೆಂಪಗೆ ಮಾಡಿಕೊಂಡು ಬರುವ, ಮಿಲಿಟರಿ ಶಿಸ್ತಿನ, ಚಿಕ್ಕ ತಪ್ಪಾದರೂ ದಂಡಿಸುವ ಅಪ್ಪ ಒಂದು ರೀತಿಯ ರಫ್ ಅಂಡ್ ಟಫ್ ಕ್ಯಾರೆಕ್ಟರ್ ಆಗಿತ್ತು.


ಆದರೆ ಕಾಲ ಬದಲಾದಂತೆ ಅಪ್ಪನ ಪಾತ್ರ ಬದಲಾಗುತ್ತಿದೆ. ಈಗ ಅಪ್ಪ ಎಂದರೆ ನಮ್ಮ ಬೆಸ್ಟ್ ಫ್ರೆಂಡ್. ಸೈಕಲ್ ಹೊಡೆಯಲು ಕಲಿಸುವ, ಸಣ್ಣ ಸಣ್ಣ ಸಂಗತಿಗಳನ್ನು ಹಂಚಿಕೊಳ್ಳುವ, ಕೆಲವೊಂದು ಕಡೆ ಮಕ್ಕಳ ಭವಿಷ್ಯಕ್ಕೆ ಸಪೋರ್ಟ್ ಆಗಿ ನಿಂತಿರುವ, ಪಾರ್ಟಿ ಮಾಡಿ ಖುಷಿ ಪಡುವ ಅಪ್ಪಂದಿರನ್ನು ನೋಡಿದ್ದೇನೆ.


ಅಪ್ಪ ನಮ್ಮ ಪಾಲಿನ ಹೀರೋ ಮಾತ್ರವಲ್ಲ, ನಮ್ಮ ಕನಸಿನ ಜೊತೆಗಾರ ಕೂಡ. ನಾವು ಚಿಕ್ಕವರಿದ್ದಾಗ. ಅಪ್ಪ ನಮ್ಮ ಪಾಲಿನ ಹೀರೋ. ದೊಡ್ಡವರಾದ ಮೇಲೆ ಅಪ್ಪನಿಗೆ ಏನು ಗೊತ್ತಿಲ್ಲ ಅನಿಸುತ್ತದೆ. ಆದರೆ ನಾವು ಅಪ್ಪನ ಪಾತ್ರಕ್ಕೆ ಬಂದಾಗ ಫೋಟೋದಲ್ಲಿದ್ದ. ಅಪ್ಪ ನನ್ನು ನೋಡಿದಾಗ, ಅಪ್ಪನ ಹೋರಾಟ, ಕಣ್ಣಿಗೆ ಬಂದಾಗ, "ಅಪ್ಪ ಇಸ್ ಗ್ರೇಟ್" ಎನಿಸುತ್ತದೆ.


A.R. ಮಣಿಕಾಂತ್ ಬರೆದ "ಅವ್ವ ಹೇಳಿದ ಎಂಟು ಸುಳ್ಳುಗಳು, ಮತ್ತು ಅಪ್ಪ ಎಂದರೆ ಆಕಾಶ" ಪುಸ್ತಕವನ್ನು ಓದಿದಾಗ ಅಪ್ಪನ ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ನನ್ನ ಪಾಲಿಗೆ ಅಪ್ಪನೆ ಬೆಸ್ಟ್ ಫ್ರೆಂಡ್. ಚಿಮಣಿ ಬೆಳಕಿನಲ್ಲಿ ಇಂಗ್ಲಿಷ್ ಹೇಳಿ ಕೊಡುತ್ತಿದ್ದ ಅಪ್ಪ, ಮೂರನೇ ಕ್ಲಾಸಿಗೆ ಇಂಗ್ಲಿಷ್ ಭಾಷಣ ಮಾಡಲು ಸ್ಟೇಜ್ ಹತ್ತಿಸಿದ ಅಪ್ಪ, ಮದುವೆ ಆದಾಗ ಅತ್ತಿದ್ದ ಅಪ್ಪ, ಮಗ ಹುಟ್ಟಿದಾಗ ನೋಡಿ ಮುದ್ಧಿಸಿದ ಅಪ್ಪ, ಉಪನಯನ ಮಾಡಿ ಮಂತ್ರ ಕಲಿಸುವ ಕನಸು ಕಂಡಿದ್ದ ಅಪ್ಪ, ಮಗಳು ಲೆಕ್ಚರರ್ ಆಗಲೆಂದು ಕನಸು ಕಂಡಿದ್ದ ಅಪ್ಪ, ಇವೆಲ್ಲವೂ ನೆನಪುಗಳಷ್ಟೇ.

ಮತ್ತೊಮ್ಮೆ ಪಿತೃ ದೇವೋ ಭವ.


-ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top