ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ತಂಡವು ಉತ್ತಮ ಸಾಧನೆಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಂಗಳೂರು ವಿಭಾಗ ಮಟ್ಟದ ವಿವಿಧ ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.ಈ ವಿಜಯದೊಂದಿಗೆ ಕಾಲೇಜಿನ ತಂಡವು ಮೇ 15 ರಿಂದ 17ರ ವರೆಗೆ ಬಳ್ಳಾರಿಯ ಬಿಐಟಿಎಂ ನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪಧೆಯಲ್ಲಿ ಭಾಗವಹಿಸುವ ಅರ್ಹತೆ ಗಳಿಸಿಕೊಂಡಿದೆ.
ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿವೇಕ್. ಕೆ.ವಿ, ಅಂತಿಮ ವರ್ಷದ ಎಐಎಂಎಲ್ ವಿಭಾಗದ ಅನ್ವಿತ್.ಬಿ.ಎನ್, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಭೀಮಯ್ಯ.ಎಂ.ಆರ್, ತೃತೀಯ ಸಿವಿಲ್ ವಿಭಾಗದ ಮೌನೇಶ್.ಡಿ.ಜೆ, ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಕೌಶಲ್ ಗೌಡ.ಆರ್, ವೀಕ್ಷಿತ್ ಗೌಡ, ಧೀಮಂತ್.ಪಿ.ಜೆ, ಶಿವಶಂಕರ್, ಮನೀಶ್.ಎಚ್.ಎಂ, ದ್ವಿತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ವೈ.ಪಿ.ದಿಗಂತ್, ಅಂತಿಮ ಎಲೆಕ್ಟ್ರಾನಿಕ್ಸ್ ವಿಭಾಗದ ವಿಜಿತ್.ಬಿ, ತೃತೀಯ ಎಐಎಂಎಲ್ ವಿಭಾಗದ ಧನ್ವಿತ್ ಶೆಟ್ಟಿ, ದ್ವಿತೀಯ ಎಐಎಂಎಲ್ವಿ ಭಾಗದ ಭುವನ್.ಕೆ.ಡಿ, ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸುಮಂತ್.ಬಿ.ಪಿ ಮತ್ತು ಪ್ರಥಮ ಎಲೆಕ್ಟ್ರಾನಿಕ್ಸ್ ವಿಭಾಗದ ವಂಶ್, ಪೊನ್ನಪ್ಪ.ಎ.ಜಿ ಅವರನ್ನೊಳಗೊಂಡ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಪ್ರಥಮ ಬಾರಿಗೆ ಹಾಕಿ ಪಂದ್ಯಾ ವಳಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ ಎಂದು ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ