ಬೆಂಗಳೂರು: "ಭಾರತೀಯ ಸೈನ್ಯವು ಮಾರ್ಚ್ 7 ಕ್ಕೆ ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಕೇಂದ್ರಗಳ ಮೇಲೆ ಅತ್ಯಂತ ನಿಖರವಾಗಿ ಮತ್ತು ನಿರ್ಣಾಯಕವಾಗಿ ವೈಮಾನಿಕ ದಾಳಿ ನಡೆಸಿ ಆ ಕೇಂದ್ರಗಳನ್ನು ನಾಶ ಮಾಡಿದೆ. ಇದು ಕೇವಲ ಒಂದು ಸೈನ್ಯದ ಕಾರ್ಯಾಚರಣೆಯಲ್ಲ, ದೇಶದ ಗೌರವ, ಸುರಕ್ಷತೆ ಮತ್ತು ಆತ್ಮ ಸನ್ಮಾನದ ಶಂಖನಾದವಾಗಿದೆ, ಎಂದು ಸನಾತನ ಸಂಸ್ಥೆಯ ವಕ್ತಾರ ಅಭಯ ವರ್ತಕ ಪ್ರತಿಪಾದಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಪಹಲ್ಗಾವ್ ನಲ್ಲಿ 26 ಅಮಾಯಕ ಹಿಂದೂ ಪ್ರಯಾಣಿಕರ ಬರ್ಬರ ಹತ್ಯೆ ಮಾಡಲಾಗಿತ್ತು, ಈ ದಾಳಿ ಕೇವಲ ಕೆಲವು ವ್ಯಕ್ತಿಗಳ ಮೇಲೆ ಆಗದೆ, ಸಂಪೂರ್ಣ ಹಿಂದೂ ಸಮಾಜದ ಮೇಲೆ ಆಗಿತ್ತು. ಭಾರತದ ಸಂಸ್ಕೃತಿಯ ಮೇಲೆ ಆಗಿತ್ತು. ಈ ಕ್ರೂರತೆಯ ಪ್ರತಿಕಾರ ಭಾರತೀಯ ಸೈನ್ಯ ತೆಗೆದುಕೊಂಡಿದೆ. ಇದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಭಾರತೀಯರ ಹೃದಯಕ್ಕೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ