ಪೂರ್ವೀ ಕೃಷ್ಣ ಭರತನಾಟ್ಯ ರಂಗಪ್ರವೇಶ ಮೇ 12ರಂದು

Chandrashekhara Kulamarva
0



ಮಂಗಳೂರು: ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಪುತ್ರಿ ಹಾಗೂ ಶಿಷ್ಯೆಯಾದ ಪೂರ್ವೀ ಕೃಷ್ಣ ಇವರ ಭರತನಾಟ್ಯ ರಂಗಪ್ರವೇಶವು ಮೇ 12ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30 ಗಂಟೆಗೆ ಜರಗಲಿದೆ.


ಕಳೆದ 12 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಭರತನಾಟ್ಯದ ಸೀನಿಯರ್ ಹಂತದ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು  ದೇಶ ಹಾಗೂ ವಿದೇಶಗಳಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿರುತ್ತಾರೆ. ಭಾರತ ಸರಕಾರದ ಸಿ ಸಿ ಅರ್ ಟಿ ಶಿಷ್ಯವೇತನ ಪಡೆದಿರುವ ಈಕೆ  ರಾಗತರಂಗದ ಬಾಲಪ್ರತಿಭೋತ್ಸವದ ಅಧ್ಯಕ್ಷೆಯಾಗಿ ಆಯ್ಕೆಯಾಗಿ ರುತ್ತಾರೆ. ಹಲವಾರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದಿರುವ ಇವರು ಸಂತ ಅಲೋಸಿಯಸ್  ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.



ಸಭಾ ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಉಳ್ಳಾಲ,   ಕಟೀಲಿನ  ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭಾ ಧನಂಜಯ್ ಭಾಗವಹಿಸಲಿದ್ದಾರೆ.


ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಮೃದಂಗದಲ್ಲಿ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಬೆಂಗಳೂರು ಹಾಗೂ ವೀಣೆಯಲ್ಲಿ ಅನಂತ್ ನಾರಾಯಣನ್ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ ಎಂದು ಸಂಸ್ಥೆಯ ನಿರ್ದೇಶಕ ಕಾರ್ಯದರ್ಶಿ ರಾಧಾಕೃಷ್ಣ ಭಟ್ ತಿಳಿಸಿರುತ್ತಾರೆ.

Post a Comment

0 Comments
Post a Comment (0)
To Top